ಮಡಿಕೇರಿ, ಅ. 2: ಮಾದಾಪುರ ಬಳಿಯ ಮೂವತ್ತೊಕ್ಲುವಿನಲ್ಲಿ ಭೂಕುಸಿತದಿಂದ ಸಾವನ್ನಪ್ಪಿರುವ ಮುಕ್ಕಾಟಿರ ಸಾಬು ಉತ್ತಪ್ಪ ಕುಟುಂಬಕ್ಕೆ ಇಂದು ದೇವಣಗೇರಿ ಗ್ರಾಮಸ್ಥರ ಪರವಾಗಿ ದೇವಣಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ ರೂ. 74 ಸಾವಿರ ಮೌಲ್ಯದ ಪೀಠೋಪಕರಣಗಳನ್ನು ಹಸ್ತಾಂತರಿಸಲಾಯಿತು.
ಉತ್ತಪ್ಪ ಪತ್ನಿ ತಂಗಮ್ಮ ದೇವಣಗೇರಿಯವರಾಗಿದ್ದು, ಅವರ ಸೋದರ ಲೆನ್ನಿ ಚಿಣ್ಣಪ್ಪ ಮೂಲಕ ಕ್ಲಬ್ ಅಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಐಚಂಡ ಈರಪ್ಪ, ಪುಗ್ಗೇರ ಮಾದಯ್ಯ ಹಾಗೂ ಕಿಶನ್, ಮೂಕೊಂಡ ಉಮೇಶ್ ಹಾಗೂ ನಂಜಪ್ಪ, ಮಾದಾಪುರ ನಿವಾಸಕ್ಕೆ ತೆರಳಿ ತವರೂರಿನ ತಂಗಮ್ಮ ಅವರಿಗೆ ಸಹಾಯ ಹಸ್ತ ನೀಡಿದರು.