ಮಡಿಕೇರಿ, ಸೆ. 29: ಮಕ್ಕಂದೂರು ಹೋಂಸ್ಟೇ ಅಸೋಸಿಯೇಷನ್ ವತಿಯಿಂದ ಅಕ್ಟೋಬರ್ 2 ರಂದು ಮಕ್ಕಂದೂರಿನಲ್ಲಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಮಕ್ಕಂದೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಮಕ್ಕಂದೂರು ಗ್ರಾಮ ಪಂಚಾಯಿತಿಯೂ ಕೈಜೋಡಿಸಲಿದೆ ಎಂದು ಮಕ್ಕಂದೂರು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಶಾಂತೆಯಂಡ ವಿಕಾಸ್ ಅಚ್ಚಯ್ಯ ತಿಳಿಸಿದ್ದಾರೆ. ಈ ಸಂಘ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು, ಉಪಾಧ್ಯಕ್ಷರಾಗಿ ಹಂಚೆಟ್ಟಿರ ಮನು ಮುದ್ದಪ್ಪ ಹಾಗೂ ಕಾರ್ಯದರ್ಶಿಯಾಗಿ ಅಯ್ಯಪ್ಪ ನೇಮಕಗೊಂಡಿದ್ದಾರೆ.