ಕುಶಾಲನಗರ, ಸೆ. 29: ಬೈಲುಕೊಪ್ಪ ಪೊಲೀಸ್ ಠಾಣೆಗೆ ನೂತನ ಠಾಣಾಧಿಕಾರಿಯಾಗಿ ಸಿ.ಯು. ಸವಿ ನೇಮಕಗೊಂಡಿದ್ದಾರೆ. ಕಳೆದ 53 ವರ್ಷಗಳ ಅವಧಿಯಲ್ಲಿ ಬೈಲುಕೊಪ್ಪ ಠಾಣೆಗೆ ಪ್ರಥಮ ಮಹಿಳಾ ಠಾಣಾಧಿಕಾರಿಯಾಗಿ ನೇಮಕಗೊಂಡಿರುವ ಸವಿ ಅವರು ಈ ಹಿಂದೆ ನಂಜನಗೂಡು ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹಿಂದಿನ ಠಾಣಾಧಿಕಾರಿ ಲೋಕೇಶ್ ಅವರು ಬೆಟ್ಟದಪುರ ಠಾಣೆಗೆ ವರ್ಗವಾಗಿದ್ದಾರೆ.

ಸಿ.ಯು. ಸವಿ ಕೊಡಗು ಜಿಲ್ಲೆಯ ಬೆಟ್ಟಗೇರಿ ನಿವಾಸಿಯಾಗಿದ್ದು, ಚಳಿಯಂಡ ಉತ್ತಯ್ಯ ಮತ್ತು ಕಮಲ ಅವರ ಪುತ್ರಿಯಾಗಿದ್ದಾರೆ.