ಸುಂಟಿಕೊಪ್ಪ, ಸೆ. 29: ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಆಯೋಜಿಸಲಾಗಿದ್ದ ಸುಂಟಿಕೊಪ್ಪ ಹೋಬಳಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ sಸೋಮವಾರಪೇಟೆ ವಾಹನ ಚಾಲಕರ ಸಂಘದವರು ಆಯುಧಾ ಪೂಜಾ ಸಮಾರಂಭಕ್ಕೆ ಸಂಗ್ರಹಿಸಿದ 50,000 ಮೊತ್ತದ ಚೆಕ್ನ್ನು ಮುಖ್ಯ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಪಿ.ಐ.ವಿದ್ಯಾ ಅವರಿಗೆ ಹಸ್ತಾಂತರಿಸಿದರು. ಸೋಮವಾರಪೇಟೆ ವಾಹನ ಚಾಲಕರ ಸಂಘದ ಅಧ್ಯಕ್ಷ ಸಿ.ಸಿ.ನಂದ, ಕಾರ್ಯದರ್ಶಿ ಬಾಲಕೃಷ್ಣ, ಸದಸ್ಯರಾದ ಬಿ.ಕೆ. ಶೇಷಪ್ಪ, ರಂಗ, ಡೈನಿ ಹಾಜರಿದ್ದರು.