ಗೋಣಿಕೊಪ್ಪ ವರದಿ, ಸೆ. 29: ನೆಹರು ಯುವ ಕೇಂದ್ರ ಹಾಗೂ ಮಾನಿಲ್ ಅಯ್ಯಪ್ಪ ಯುವಕ ಸಂಘದ ಸಹಯೋಗದಲ್ಲಿ ದೀನ್ ದಯಾಳ್ ಉಪಾದ್ಯಾಯ ಜನ್ಮ ದಿನಾಚರಣೆಯನ್ನು ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಆವರಣದಲ್ಲಿ ನಡೆಸಲಾಯಿತು.

ದೀನ್ ದಯಾಳ್ ಉಪಾದ್ಯಾಯ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸುವ ಮೂಲಕ ಗೌರವ ಅರ್ಪಿಸಲಾಯಿತು. ಸಮಿತಿ ಗೌರವ ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್ ದೀನ್ ದಯಾಳ್ ಅವರ ಆತ್ಮಚರಿತ್ರೆ ನೀಡಿದರು. ಸಂಘದ ಆವರಣ ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್, ಮಾನಿಲ್ ಅಯ್ಯಪ್ಪ ಯುವಕ ಸಂಘ ಅಧ್ಯಕ್ಷ ಚೆಪ್ಪುಡಿರ ಪ್ರದೀಪ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.