ಮೂರ್ನಾಡು, ಸೆ. 29: ಮೂರ್ನಾಡು ಪದವಿ ಕಾಲೇಜಿನಲ್ಲಿನ ಎನ್.ಸಿ.ಸಿ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಪಥಸಂಚಲನ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದು, ದ್ವಿತೀಯ ಬಿ.ಕಾಂ.ನ ವಿದ್ಯಾರ್ಥಿಗಳಾದ ಗೌರಮ್ಮ, ಕಮಲ, ಶೃತಿ ಹಾಗೂ ಶಿವಕುಮಾರ್, ಪ್ರಥಮ ಬಿ.ಕಾಂ.ನ ವಿದ್ಯಾರ್ಥಿಗಳಾದ ವೀಕ್ಷಿತಾ ಹಾಗೂ ಶಾಂಭವಿ ಇವರುಗಳು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಸೆಪ್ಟೆಂಬರ್ 28ರಿಂದ ಪ್ರಾರಂಭವಾಗಿ ಅಕ್ಟೋಬರ್ 8ಕ್ಕೆ ಕೊನೆಗೊಳ್ಳಲಿರುವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.