ಸೋಮವಾರಪೇಟೆ, ಸೆ. 29: ಚೌಡ್ಲು ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಬಂದ 1850 ಆಹಾರ ಕಿಟ್‍ಗಳನ್ನು ವ್ಯವಸ್ಥಿತವಾಗಿ ಅರ್ಹ ಫಲಾನುಭವಿಗಳಿಗೆ ವಿತರಿಸಿದ್ದು, ಬೆಂಗಳೂರಿನಿಂದ ಉದ್ಯಮಿಯೋರ್ವರು ಕಳುಹಿಸಿದ ಆಹಾರ ಸಾಮಗ್ರಿಗಳನ್ನು ಮಾತ್ರ ಪಂಚಾಯಿತಿ ಸಿಬ್ಬಂದಿಗಳಿಗೆ ವಿತರಿಸಿದ್ದೇವೆ ಎಂದು ಚೌಡ್ಲು ಗ್ರಾ.ಪಂ. ಅಧ್ಯಕ್ಷರ ಸಹಿತ ಕೆಲ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರದಿಂದ ಬಂದ ಕಿಟ್‍ಗಳನ್ನು ಒಂದು ವಾರಗಳ ಕಾಲ ಕಾವಲು ಕಾಯ್ದಿರುವ ಪಂಚಾಯಿತಿಯ ಸಿಬ್ಬಂದಿಗಳಿಗೆ ಉದ್ಯಮಿ ಒದಗಿಸಿದ ನೆರವಿನ ಆಹಾರ ಸಾಮಗ್ರಿಗಳನ್ನು ನಾವುಗಳು ನೀಡಿದ್ದೇವೆ. ಇಲ್ಲಿ ಯಾವದೇ ದುರುಪಯೋಗವಾಗಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ನಾಗಮ್ಮ, ಸದಸ್ಯರುಗಳಾದ ರಮ್ಯ ಕರುಣಾಕರ್, ಕೆ.ಆರ್. ದಿವ್ಯ, ಲತೀಶ್, ದೇವಿಪ್ರಸಾದ್, ಸಿ.ಸಿ. ನಂದ ಅವರುಗಳು ಲಿಖಿತ ಹೇಳಿಕೆ ನೀಡಿದ್ದಾರೆ.