ಗೋಣಿಕೊಪ್ಪ ವರದಿ, ಸೆ. 28: ಪೆÇನ್ನಂಪೇಟೆಯ ಸಿಐಟಿ ಇಂಜಿನಿಯರಿಂಗ್ ಕಾಲೇಜಿನ ರೋಟರ್ಯಾಕ್ಟ್ ಸಂಸ್ಥೆಯ ಪದಗ್ರಹಣ ನಡೆಯಿತು.

ಪೆÇನ್ನಂಪೇಟೆ ಸಿಐಟಿ ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಏರ್ಪಡಿಸಿದ್ದ ರೋಟರ್ಯಾಕ್ಟ್ ಪದಗ್ರಹಣ ಕಾರ್ಯಕ್ರಮದಲ್ಲಿ ರೋಟರ್ಯಾಕ್ಟ್ ಅಧ್ಯಕ್ಷರಾಗಿ ವಿ. ಪುನೀತ್ ವಿಶ್ವಾಸ್ ಪದಗ್ರಹಣ ಸ್ವೀಕರಿಸಿದರು. ಸಂಸ್ಥೆಗೆ ಆರು ಜನ ಹೊಸ ಸದಸ್ಯರು ಸೇರ್ಪಡೆಗೊಂಡರು.

ಪೆÇನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಡೀನ್ ಸಿ.ಜಿ. ಕುಶಾಲಪ್ಪ ಮಾತನಾಡಿ, ಕೊಡಗಿಗೆ ಪೂರಕವಾದ ಆವಿಷ್ಕಾರಗಳನ್ನು ತರುವತ್ತ ವಿದ್ಯಾರ್ಥಿಗಳು ಗಮನ ಹರಿಸುವಂತೆ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಸೋಲಾರ್ ಉಪಕರಣಗಳ ಬಗ್ಗೆ ಜನರಲ್ಲಿ ಬೇಡಿಕೆ ಬರುತ್ತಿದ್ದು ಜಿಲ್ಲೆಯ ಹವಾಮಾನಕ್ಕೆ ಹೊಂದುವಂತಹ ಸೋಲಾರ್ ಉಪಕರಣಗಳನ್ನು ಆವಿಷ್ಕಾರ ಮಾಡಿದಲ್ಲಿ ಜಿಲ್ಲೆಗೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಕಳೆದ ನಾಲ್ಕು ವರ್ಷಗಳಲ್ಲಿ ಸಾಮಾಜಿಕ ಸೇವೆ ನೀಡುವ ಮೂಲಕ ರೋಟರಿ ಸಂಸ್ಥೆ ಜನರಿಗೆ ಸ್ಪಂದಿಸಿದೆ ಎಂದು ಗೋಣಿಕೊಪ್ಪ ರೋಟರಿ ಅಧ್ಯಕ್ಷ ದಿಲನ್ ಚಂಗಪ್ಪ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಕವಿತಾ, ಗೋಣಿಕೊಪ್ಪ ರೋಟರಿ ಸಂಸ್ಥೆಯ ಕಾರ್ಯದರ್ಶಿ ಬೀಟಾ, ಮಾಜಿ ಅಧ್ಯಕ್ಷ ಜಮುನ, ರೋಟರಿ ಜಿಲ್ಲೆ 3181ರ ಜಿಲ್ಲಾ ರೋಟರ್ಯಾಕ್ಟ್ ಪ್ರತಿನಿಧಿ ಮಂಜೇಶ್, ಇಮ್ಮಿ ಉತ್ತಪ್ಪ, ವಿಜಯ್ ಹಾಜರಿದ್ದರು.