ಕುಶಾಲನಗರ, ಸೆ. 28: ವಿದ್ಯಾರ್ಥಿಗಳು ತಮಗೆ ದೊರೆಯುವ ಶೈಕ್ಷಣಿಕ ಪ್ರಯೋಜನಗಳನ್ನು ಬಳಸಿಕೊಂಡು ತಮ್ಮ ಜೀವನ ಮಾರ್ಗ ಕಂಡುಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಕುಶಾಲನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ವೈಫೈ ಸೇವೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ವಾರ್ಷಿಕವಾಗಿ ರೂ. 3.5 ಲಕ್ಷ ವೆಚ್ಚದಲ್ಲಿ ಕಾಲೇಜಿಗೆ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಇಂಟರ್ನೆಟ್ಗೆ ವಿನಿಯೋಗಿಸುತ್ತಿದ್ದ ಹಣವನ್ನು ಬದಲಿಯಾಗಿ ತಮ್ಮ ಇತರ ಶೈಕ್ಷಣಿಕ ಸಾಮಗ್ರಿ ಖರೀದಿಗೆ ಬಳಸಿಕೊಂಡು ಜ್ಞಾನಾರ್ಜನೆಗೆ ಹೆಚ್ಚು ಒತ್ತು ನೀಡಬೇಕೆಂದರು. ಕಾಲೇಜು ಪ್ರಾಂಶುಪಾಲ ಡಾ. ವೆಂಕಟೇಶ್ ಡಿ. ಬೆಮ್ಮತ್ತಿ, ಬಿಎಸ್ಎನ್ಎಲ್ ವಿಭಾಗೀಯ ಅಭಿಯಂತರ ರವಿಶಂಕರ್ ಮಾತನಾಡಿದರು. ಕಾಲೇಜು ಆಡಳಿತಾಧಿಕಾರಿ ಲಿಂಗರಾಜು ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಸದಸ್ಯ ಪಿ.ಪಿ. ಸತ್ಯನಾರಾಯಣ, ಉಪನ್ಯಾಸಕ ನೀಲಪ್ಪ ಮತ್ತಿತರರು ಇದ್ದರು.