ಕುಶಾಲನಗರ, ಸೆ. 28: ಕುಶಾಲನಗರದ ಯುವಕನೊಬ್ಬ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಛಾಪುಗಳಿಸಿ ಇದೀಗ ಪ್ರತಿಷ್ಠಿತ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‍ಗೆ ಆಯ್ಕೆಯಾಗುವ ಮೂಲಕ ಉದ್ಯೋಗ ಗಳಿಸಿದ್ದಾರೆ. ಕುಶಾಲನಗರದ ಗೊಂದಿ ಬಸವನಹಳ್ಳಿ ಗ್ರಾಮದ ಜಿ.ಎಸ್. ನಂದೀಶ್ ಕಳೆದ 2016 ರಲ್ಲಿ ಗುಜರಾತ್‍ನಲ್ಲಿ ನಡೆದ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಇದೀಗ ಎಂಇಜಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಕುಶಾಲನಗರದ ಜ್ಞಾನಭಾರತಿ ಸ್ಪೋಟ್ರ್ಸ್ ಕ್ಲಬ್‍ನ ಕೋಚ್ ಹಾಗೂ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ಹೆಚ್.ಎಸ್. ಉತ್ತಪ್ಪ ಅವರ ತರಬೇತಿ, ಮಾರ್ಗದರ್ಶನದೊಂದಿಗೆ ಮತ್ತು ಸಂಸ್ಥೆಯ ಪ್ರಮುಖರ ಪ್ರೋತ್ಸಾಹದೊಂದಿಗೆ ಈ ಸಾಧನೆ ತೋರಿದ್ದಾರೆ.

ಇವರು ಗೊಂದಿಬಸವನಹಳ್ಳಿ ಗ್ರಾಮದ ಶ್ರೀನಿವಾಸ ಮತ್ತು ಲಕ್ಷ್ಮಿ ದಂಪತಿಯ ಪುತ್ರನಾಗಿದ್ದಾರೆ.