ಮಡಿಕೇರಿ, ಸೆ. 27: ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ಕುಕ್ಲೂರಿನ ಕಾವೇರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಚೊಂದಮ್ಮ ಕೆ.ಪಿ., ಮುತ್ತಮ್ಮ ಎ.ಪಿ., ಗಾನವಿ ಬೋಪಣ್ಣ ಮತ್ತು ಗಾಯನ ಬೋಪಣ್ಣ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಲಿಖಿತ್ ಎಂ.ಎನ್., ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.

ಶಾಲಾ ಪ್ರಾಂಶುಪಾಲ ಪಿ.ಎನ್. ವಿನೋದ್, ಮುಖ್ಯ ಶಿಕ್ಷಕಿ ಚಿನ್ನಮ್ಮ, ಸಹ ಶಿಕ್ಷಕಿ ನಿರೀಕ್ಷಾ ಮತ್ತು ದೈಹಿಕ ಶಿಕ್ಷಕ ಕೆ.ಜಿ. ಮಿಥುನ್ ಹಾಜರಿದ್ದರು.