ಕುಶಾಲನಗರ, ಸೆ. 27: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಶಿಥಿಲ ಗೊಂಡು ಅಪಾಯದ ಅಂಚಿನಲ್ಲಿರುವ ಕಟ್ಟಡವೊಂದು ಆಗಾಗ್ಯೆ ಕುಸಿಯುವ ಮೂಲಕ ವಾಹನ ಚಾಲಕರು ಹಾಗೂ ಪಾದ ಚಾರಿಗಳಲ್ಲಿ ಆತಂಕ ಸೃಷ್ಟಿಸಿದೆ. ಸರಕಾರಿ ಬಸ್ ನಿಲ್ದಾಣದ ಸಮೀಪವಿರುವ ಕಟ್ಟಡ ಕಳೆದ ಕೆಲವು ತಿಂಗಳಿನಿಂದ ಕುಸಿಯುತ್ತಿದ್ದು, ಇದನ್ನು ತೆರವುಗೊಳಿಸುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.
ಭಾರೀ ಅನಾಹುತ ಸಂಭವಿಸುವ ಮುನ್ನ ಅಪಾಯಕಾರಿ ಕಟ್ಟಡವನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳನ್ನು ಕೋರಿದ್ದಾರೆ.