ಮಡಿಕೇರಿ, ಸೆ. 27 : ಜೋಡುಪಾಲದಲ್ಲಿಂದು ನಾಲ್ಕೈದು ಮೂಳೆಗಳು ಪತ್ತೆಯಾಗಿವೆ. ಜಲಪ್ರವಾಹದಿಂದ ಕೊಚ್ಚಿ ಹೋಗಿದ್ದ ಸ್ಥಳದಲ್ಲಿ ಈ ಮೂಳೆಗಳು ಪತ್ತೆಯಾಗಿದ್ದು, ಪ್ರಾಕೃತಿಕ ವಿಕೋಪದ ವೇಳೆ ನಾಪತ್ತೆಯಾಗಿದ್ದ ಯುವತಿ ಮಂಜುಳಾ ಎಂಬಾಕೆಯ ಮೂಳೆಗಳಿರಬಹುದೆಂಬ ಊಹಾ ಪೋಹಗಳು ದಟ್ಟವಾಗಿ ಹರಡಿತ್ತು. ಈ ನಡುವೆ ಸ್ಥಳಕ್ಕೆ ಭೇಟಿ ನೀಡಿ ಮೂಳೆಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಅವುಗಳನ್ನು ವ್ಯದ್ಯಕೀಯ ಪರೀಕ್ಷೆಗೆ ಒಳಪಡಿಸಿ ದ್ದಾರೆ. ಮೇಲ್ನೋಟಕ್ಕೆ ಅವು ಪ್ರಾಣಿಯ ಮೂಳೆಗಳು ಎಂದು ಕಂಡುಬಂದಿದ್ದು, ಹೆಚ್ಚಿನ ಪರೀಕ್ಷೆಗಾಗಿ ಕ್ರಮಕೈಗೊಳ್ಳುವದಾಗಿ ಎಸ್ಪಿ ಡಾ. ಸುಮನ್ ‘ಶಕ್ತಿ’ಗೆ ತಿಳಿಸಿದ್ದಾರೆ.