ಚೆಟ್ಟಳ್ಳಿ, ಸೆ. 26: ಭಾಗಮಂಡಲ ಮತ್ತು ತಲಕಾವೇರಿ ವ್ಯವಸ್ಥಾಪನಾ ಸಮಿತಿ ಮತ್ತು ನಾಡಿನ ತಕ್ಕ ಮುಖ್ಯಸ್ಥರ ಮತ್ತು ಊರಿನ ಅರ್ಚಕರ ಸಭೆಯನ್ನು ತಾ. 24 ರಂದು ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ನಡೆಸಲಾಯಿತು. ದೇವಸ್ಥಾನದ ಆಡಳಿತಾಧಿಕಾರಿ ಜಗದೀಶ್ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ತುಲಾಸಂಕ್ರಮಣ ಜಾತ್ರೆಯು ಸಾಂಗವಾಗಿ ನಡೆಯುವಂತೆ ತಕ್ಕ ಮುಖ್ಯಸ್ಥರಲ್ಲಿ ಮನವಿ ಮಾಡಿದರು.ಈ ಬಾರಿ ಜಾತ್ರೆಯನ್ನು ಅಷ್ಟಮಂಗಲ ಪ್ರಶ್ನೆಯಲ್ಲಿ ಮೂಡಿ ಬಂದಂತೆ, ಹಿಂದಿನ ಕಾಲದಲ್ಲಿ ಯಾವ ರೀತ್ಯಾನುಸಾರ ಜರುಗುತಿತ್ತೋ ಅದೇ ರೀತಿಯನುಸಾರವಾಗಿ ನಡೆಸಲು ಊರಿನವರು ಹಾಗೂ ತಕ್ಕಮುಖ್ಯಸ್ತರ ಸಭೆಯಲ್ಲಿ ತೀರ್ಮಾನಿಸಲಾಯಿತು. ಇತ್ತೀಚಿನ ಬೆಳವಣಿಗೆಯ ಯಾವದೇ ಹೊಸ ಆಚರಣೆಯು ಇರುವದಿಲ್ಲ. ಭಕ್ತಾದಿಗಳು ಹಾಗೂ ಎಲ್ಲ ಸಂಘ ಸಂಸ್ಥೆಗಳು ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ತೀರ್ಮಾನಿಸಲಾಯಿತು. ಇತ್ತೀಚಿನ ಬೆಳವಣಿಗೆಯ ಯಾವದೇ ಹೊಸ ಆಚರಣೆಯು ಇರುವದಿಲ್ಲ. ಭಕ್ತಾದಿಗಳು ಹಾಗೂ ಎಲ್ಲ ಸಂಘ ಸಂಸ್ಥೆಗಳು ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. (ಮೊದಲ ಪುಟದಿಂದ) ಕೊಡುವದನ್ನು ಸ್ಥಗಿತಗೊಳಿಸಲಾಗುವದು.
ಅಷ್ಟಮಂಗಲ ಪ್ರಶ್ನೆಯ ಬಗ್ಗೆ ಜಿಲ್ಲಾಧಿಕಾರಿಯವರಿಗೆ ನಾಡಿನ ತಕ್ಕ ಮುಖ್ಯಸ್ಥರ ಹೆಸರಿನಲ್ಲಿ ಪುಕಾರು ಅರ್ಜಿಯೊಂದು ಬಂದಿದ್ದು, ಅದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಸಭೆಯಲ್ಲಿ ನೆರೆದಿದ್ದ ತಕ್ಕ ಮುಖ್ಯಸ್ಥರು ಮತ್ತು ಅರ್ಚಕರು ಅದನ್ನು ಪರಿಶೀಲಿಸಿ, ಅಲ್ಲಿ ಹಾಕಲಾದ ಸಹಿಗಳಿಗೂ, ತಮಗೂ ಯಾವದೇ ಸಂಬಂಧವಿಲ್ಲ ಎಂದು ತಿಳಿಸಿದ್ದು, ಈ ದೂರಿನ ಬಗ್ಗೆ ಖಂಡಿಸಲಾಯಿತು.
ಡ್ರಮ್, ಲಾರಿಗಳಲ್ಲಿ ತೀರ್ಥವಿಲ್ಲ
ಅಷ್ಟಮಂಗಲ ಪ್ರಶ್ನೆಯಲ್ಲಿ ಮೂಡಿ ಬಂದ ಹಾಗೆ, ತೀರ್ಥವನ್ನು ದೊಡ್ಡ ದೊಡ್ಡ ಡ್ರಮ್ಗಳಲ್ಲಿ ತುಂಬಿ ಲಾರಿಗಳಲ್ಲಿ ಕೊಂಡು ಹೋಗಿ ಬೀದಿ ಬದಿಗಳಲ್ಲಿ ವಿತರಣೆ ಮಾಡುವದರಿಂದ ಕ್ಷೇತ್ರದ ಮಹಿಮೆಗೆ ಧಕ್ಕೆ ಬರುವದರಿಂದ, ತೀರ್ಥವನ್ನು ಕ್ಯಾನ್ ಹಾಗೂ ಬಿಂದಿಗೆಗಳಲ್ಲಿ ತುಂಬಿಕೊಂಡು ಆಯಾಯ ಊರಿನ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರದ ನಂತರ ವಿತರಿಸಬೇಕಾಗಿ ತೀರ್ಮಾನಿಸಲಾಯಿತು.
ಅಕ್ಟೋಬರ್ 17 ರಂದು ಕಾವೇರಿ ತೀರ್ಥ ಬರುವ ಸಮಯದಲ್ಲಿ ತಲಕಾವೇರಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಯಾವದೇ ಖಾಸಗಿ ವಾಹನಗಳನ್ನು ಆ ದಿನ ಸಂಜೆ 4 ಗಂಟೆಯಿಂದ ತಲಕಾವೇರಿಗೆ ಹೋಗುವದನ್ನು ನಿಷೇಧಿಸಲಾಗಿದೆ. ಭಕ್ತಾದಿಗಳು ಇದಕ್ಕೆ ಸಹಕರಿಸುವಂತೆ ಕೋರಲಾಗಿದೆ.
ಕ್ಷೇತ್ರದ ಶುಚಿತ್ವದ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಭಕ್ತಾದಿಗಳು ಅಲ್ಲಲ್ಲಿ ಇಟ್ಟಿರುವ ಕಸದ ತೊಟ್ಟಿಯನ್ನು ಬಳಸಿಕೊಳ್ಳುವಂತೆ ಕೋರಲಾಗಿದೆ. ತ್ಯಾಜ್ಯಗಳನ್ನು ಬೇಕಾಬಿಟ್ಟಿ ಎಸೆದಲ್ಲಿ ಅಂತವರಿಗೆ ಪೊಲೀಸ್ ಇಲಾಖೆ ಮೂಲಕ ದಂಡ ವಿಧಿಸಲಾಗುವದು.
ತಾ. 5 ರಂದು ಕ್ಷೇತ್ರದ ಕಟ್ಟುಪಾಡು ಅನ್ವಯಿಸುವದರಿಂದ ಭಾಗಮಂಡಲ-ತಲಕಾವೇರಿ ಕ್ಷೇತ್ರದ ಸುತ್ತಮುತ್ತಲ ಪ್ರದೇಶದಲ್ಲಿ ಮದ್ಯ ಮೀನು ಮಾಂಸ ನಿಷೇಧಿಸಲಾಗಿದೆ .
ತಾ. 16 ರಂದು ಬಂಡಾರವನ್ನು ಬೆಳಿಗ್ಗೆ ಹಳೆಯ ಸಂಪ್ರದಾಯದಂತೆ, ಭಾಗಮಂಡಲ ತಲಕಾವೇರಿ ತಕ್ಕ ಮುಖ್ಯಸ್ಥರು ಮತ್ತು ಸುತ್ತಮುತ್ತಲ ಗ್ರಾಮದ ತಕ್ಕ ಮುಖ್ಯಸ್ಥರು ಸೇರಿ ದೇವಸ್ಥಾನದ ಆಡಳಿತ ಅಧಿಕಾರಿ ಸುಪರ್ದಿಯಿಂದ ಭಾಗಮಂಡಲ ದಿಂದ ತಲಕಾವೇರಿಗೆ ಕೊಂಡೊಯ್ಯಲಾಗುವದು.
ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆದಂಬಾಡಿ ರಮೇಶ್, ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ, ನಿಡ್ಯಮಲೆ ಮೀನಾಕ್ಷಿ,ಉದಿಯಾಂಡ ಸುಭಾಷ್, ಡಾ. ಸಣ್ಣುವಂಡ ಕಾವೇರಪ್ಪ, ಅಣ್ಣಯ್ಯ, ರವಿ ಹೆಬ್ಬಾರ್, ಕುದುಪೆಜೆ ಪ್ರಕಾಶ್, ಪಿ. ಪುರುಷೋತ್ತಮ್, ಬಳ್ಳಡ್ಕ ಅಪ್ಪಾಜಿ, ಸೂರ್ತಲೆ ಜಯಂತ್, ಶಿವ ವೈದ್ಯ, ಸಿರಿಕಜೆ ಸುಂದರ ಸುತ್ತಮುತ್ತಲ ಎಲ್ಲ ದೇವಸ್ಥಾನದ ತಕ್ಕರು ಮತ್ತು ಅಧ್ಯಕ್ಷರು ಹಾಜರಿದ್ದರು.