ಕೊಡಗಿನ ಪ್ರಸ್ತುತದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಉತ್ಸವವನ್ನು ಪೂಜೆ ಪುನಸ್ಕಾರಕ್ಕೆ ಸೀಮಿತಗೊಳಿಸುವದು ಉತ್ತಮ ಎಂಬದು ನನ್ನ ಅನಿಸಿಕೆ. ಉಳಿದಂತೆ ಯಾವದೇ ಅದ್ಧೂರಿ ಆಡಂಬರಕ್ಕೆ ತನ್ನ ಸಹಮತವಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದ್ದಾರೆ. ಸಮಿತಿ ತೀರ್ಮಾನಕ್ಕೆ ಬದ್ಧ: ಕೆಜಿಬಿ ಮಡಿಕೇರಿಯಲ್ಲಿ ಸರಳ ದಸರಾ ಆಚರಣೆಗೆ ತೀರ್ಮಾನ ಕೈಗೊಂಡಿರುವ ಬಗ್ಗೆ ಗೋಣಿಕೊಪ್ಪ ದಸರಾ ಸಮಿತಿಯ ಗಮನ ಸೆಳೆದಿದ್ದೇನೆ. ಗೋಣಿಕೊಪ್ಪ ದಸರಾ ಸಮಿತಿ ಯಾವ ರೀತಿ ನಿರ್ಣಯ ಕೈಗೊಳ್ಳುತ್ತದೆಯೋ ಅದಕ್ಕೆ ತಾನು ಬದ್ಧನಾಗಿರುವದಾಗಿ ವೀರಾಜಪೇಟೆ ಶಾಸಕ

ಕೆ.ಜಿ. ಬೋಪಯ್ಯ ಹೇಳಿದ್ದಾರೆ.

(ಮೊದಲ ಪುಟದಿಂದ)

ಸರಳ ದಸರಾಗೆ ಅನುದಾನ: ವೀಣಾ

ಮಡಿಕೇರಿ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಕೈಗೊಳ್ಳಲಾಗಿರುವ ತೀರ್ಮಾನಕ್ಕೆ ಸರಕಾರದ ಸಹಮತವೂ ಇದ್ದು, ಸರಳ ದಸರಾ ಆಚರಣೆಗೆ ಸರಕಾರದಿಂದ ಅನುದಾನ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಳ್ಳೆಯ ನಿರ್ಧಾರ ಕೈಗೊಳ್ಳುತ್ತೇವೆ: ಸುನಿಲ್

ಈ ಬಾರಿ ದಸರಾ ಉತ್ಸವ ಆಡಂಬರವಿಲ್ಲದೆ ಸಾಂಪ್ರದಾಯಿಕವಾಗಿ ನಡೆಯಬೇಕು ಎಂಬ ಭಾವನೆ ಜನರ ಮನದಲ್ಲಿದೆ. ಉಸ್ತುವಾರಿ ಸಚಿವರು ಕೂಡ ದಸರಾ ಸಂಪ್ರದಾಯಬದ್ಧವಾಗಿ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಅವರು ಮಡಿಕೇರಿಗೆ ಬರಲಿದ್ದು, ಎಲ್ಲರೂ ಒಟ್ಟಾಗಿ ಪಕ್ಷ ಬೇಧ ಮರೆತು ಸಚಿವರೊಂದಿಗೆ ಚರ್ಚಿಸಿ ಒಳ್ಳೆಯ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದ್ದಾರೆ.