ಗೋಣಿಕೊಪ್ಪಲು, ಸೆ. 26: ಕೊಡಗು ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸು, ಏಲಕ್ಕಿ, ಅಡಿಕೆ ಇತ್ಯಾದಿ ಬೆಳೆಗಳು ಅತಿವೃಷ್ಟಿ, ಹವಾಮಾನ ವೈಪರೀತ್ಯದಿಂದ ನೆಲಕಚ್ಚಿದ್ದು ಕಡಿಮೆ ಬಂಡವಾಳ, ಕಡಿಮೆ ಸ್ಥಳದಲ್ಲಿ ಅತ್ಯಧಿಕ ಲಾಭದಾಯಕವಾಗಿ ಔಷಧಿ ಸಸ್ಯಗಳನ್ನು ಉಪಕೃಷಿಯಾಗಿ ಬೆಳೆದು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಕೊಳ್ಳುವ ನಿಟ್ಟಿನಲ್ಲಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೊಡಗು ಪಾರಂಪರಿಕ ವೈದ್ಯಪರಿಷತ್ ಸಂಯುಕ್ತ ಆಶ್ರಯದಲ್ಲಿ ಕೊಡಗಿನಲ್ಲಿ ವಾಣಿಜ್ಯ ಕೃಷಿಯಾಗಿ ಔಷಧಿ ಸಸ್ಯಗಳು, ಮಾರಾಟ ಮತ್ತು ಮನೆಮದ್ದು ಕುರಿತ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಪರಿಷತ್ನ ಜಿಲ್ಲಾ ಸಂಚಾಲಕಿ ಬಿ.ಪಿ. ಚಿತ್ರಾವತಿ ಹಾಗೂ ಕಾರ್ಯಕ್ರಮ ಸಂಯೋಜಕ ಟಿ.ಎಲ್. ಶ್ರೀನಿವಾಸ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಮಾಹಿತಿ ನೀಡಿದ ಅವರು, ಗೋಣಿಕೊಪ್ಪಲು ಕೆವಿಕೆ ಹಿರಿಯ ವಿಜ್ಞಾನಿ, ಮುಖ್ಯಸ್ಥರಾದ ಡಾ. ಸಾಜು ಜಾರ್ಜ್ ಅಧ್ಯಕ್ಷತೆಯಲ್ಲಿ ಕಾರ್ಯಾಗಾರ ಜರುಗಲಿದೆ. ಇದೇ ಸಂದರ್ಭ ಚಿನ್ನದ ಪದಕವಿಜೇತ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ. ಸತ್ಯನಾರಾಯಣ ಭಟ್ ರಚಿತ ‘ಮಂಗರಸನ ಮೆನು’ ಆರೋಗ್ಯಪೂರ್ಣ ಸಸ್ಯಹಾರಿ ಆಡುಗೆ ಕುರಿತಾದ ಕೃತಿಯನ್ನು ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದ ಸ್ವಾಮೀಜಿ ಬಿಡುಗಡೆಗೊಳಿಸಲಿದ್ದಾರೆ.
ಕೊಡಗಿನ ಹವಾಗುಣ ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ಬೆಳೆಯಬಹುದಾದ ಲಾಭದಾಯಕ ವನಸ್ಪತಿ, ಔಷಧಿ ಸಸ್ಯಗಳ ಕೃಷಿ, ಮಾರಾಟ ಮತ್ತು ಲಭ್ಯವಾಗುವ ಮಾರುಕಟ್ಟೆ ದರದ ಬಗ್ಗೆ ಹಾಗೂ ಮನೆಮದ್ದು ಅಗತ್ಯದ ಬಗ್ಗೆ ಡಾ. ಸತ್ಯನಾರಾಯಣ ಭಟ್ ವಿಷಯ ಮಂಡನೆ ಮಾಡಲಿದ್ದಾರೆ.
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಆಯ್ದ ರೈತರು ಹಾಗೂ ಪಾರಂಪರಿಕ ವೈದ್ಯರಿಗಾಗಿ ಕಾರ್ಯಾಗಾರವನ್ನು ತಾ. 27 ರಂದು (ಇಂದು) ಪೂರ್ವಾಹ್ನ 11 ಗಂಟೆಗೆ ಏರ್ಪಡಿಸಲಾಗಿದ್ದು, ಮರ ವಿಜ್ಞಾನ ಹಾಗೂ ಪರಿಸರ ಸಂರಕ್ಷಣೆ ಕುರಿತು ಪೆÇನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಮಾಹಿತಿ ನೀಡಲಿದ್ದಾರೆ.
ಮೈಸೂರು ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನ ಆಯ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಮೈತ್ರಿ ಅವರು ಅಯುರ್ವೇದ ಮಹತ್ವದ ಕುರಿತು ಮಾತನಾಡಲಿದ್ದಾರೆ. ಕೊಡಗು ಜಿಲ್ಲಾ ಪೆÇಲೀಸ್ ಅಧೀಕ್ಷಕಿ ಸುಮನ್ ಪಣ್ಣೇಕರ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೆವಿಕೆ ವಿಷಯ ತಜ್ಞ ಪ್ರಭಾಕರ್ ಬಿ. (ತೋಟಗಾರಿಕೆ) ಹಾಗೂ ಕೆ.ವಿ. ವೀರೇಂದ್ರಕುಮಾರ್ (ಸಸ್ಯಶಾಸ್ತ್ರ) ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಗರಸನ ಮೆನು ಕುರಿತು: ಮಂಗರಸನ ಅರಮನೆಯಲ್ಲಿ ರಚನೆಗೊಂಡ 16ನೇ ಶತಮಾನಕ್ಕೂ ಮೊದಲಿನ ಅಡುಗೆ ಪದ್ಧತಿಯನ್ನು, ಪ್ರಯೋಗವನ್ನು ಕೊಂಚ ಮಾರ್ಪಾಡು ಮಾಡಿ ಆರೋಗ್ಯಕರ, ಶ್ರೀಮಂತ ಅಡುಗೆ ಪದ್ಧತಿ, ವಿವಿಧ ತಿಂಡಿಗಳು, ಪಾನೀಯಗಳು, ಅಕ್ಕಿಯಿಂದ ತಯಾರಿಸಲಾದ ಪದಾರ್ಥಗಳು, ಕಣಲೆ (ಎಳೆಬಿದಿರು) ತಯಾರಿತ ಪದಾರ್ಥಗಳು, ಅಡುಗೆಗೆ ಬಳಸುವ ಪಾತ್ರೆಗಳು, ಒಲೆಗಳು ಇತ್ಯಾದಿಗಳ ಬಗ್ಗೆ ಸಾಹಿತಿ ಡಾ. ಸತ್ಯನಾರಾಯಣ ಭಟ್ ತಮ್ಮ ‘ಮಂಗರಸನ ಮೆನು’ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ.