ಮಡಿಕೇರಿ, ಸೆ. 23: ಪ್ರಸಕ್ತ ಸಾಲಿನ ಸಂಗೀತ ಪರೀಕ್ಷೆಯ ಕಿರಿಯರ ವಿಭಾಗದಲ್ಲಿ ಸಿ.ಎಸ್. ದೇವಿಕಾ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಶೇ. 85 ಸಾಧನೆ ತೋರಿದ್ದಾಳೆ. ಕೊಡಗು ವಿದ್ಯಾಲಯ ಭಾರತೀಯ ವಿದ್ಯಾಭವನ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ನಗರದ ಸುಮತಿ ಹಾಗೂ ಸಜಿತ್‍ಕುಮಾರ್ ದಂಪತಿ ಪುತ್ರಿ. ಸಂಗೀತ ಶಿಕ್ಷಕಿ ವೀಣಾ ಎಸ್. ಹೊಳ್ಳ ಅವರ ಶಿಷ್ಯೆ.