ಮಡಿಕೇರಿ, ಸೆ. 23: ವೀರಾಜಪೇಟೆಯ ರೋಟರಿ ಕ್ಲಬ್‍ನಲ್ಲಿ “ಪ್ರಕೃತಿ ವಿಕೋಪ ಮತ್ತು ಪರಿಹಾರ” ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಂದೆಯಂಡ ವನಿತ್ ಕುಮಾರ್ ಭಾಗವಹಿಸಿದ್ದರು.

ಈ ಸಂದರ್ಭ ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ರವಿ, ಕಾರ್ಯದರ್ಶಿ ನವೀನ್ ಕ್ಲಬ್‍ನ ಸದಸ್ಯರು ಉಪಸ್ಥಿತರಿದ್ದರು.