ಮಡಿಕೇರಿ, ಸೆ.22 : ಪ್ರತಿಯೊಂದು ಧರ್ಮಗ್ರಂಥ ಮತ್ತು ಪುರಾಣಗಳ ಬಗ್ಗೆ ಅರಿತುಕೊಂಡಾಗ ಮಾತ್ರ ಆಯಾ ಧರ್ಮಗಳ ಆಂತರಿಕ ವಿಷಯಗಳನ್ನು ತಿಳಿಯಲು ಸಾಧ್ಯ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ನ ಅಧ್ಯಕ್ಷ ಹಾಗೂ ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕÀ ಬಿ.ಜಿ.ಅನಂತಶಯನ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊಡವ ಮಕ್ಕಡ ಕೂಟ ಹಾಗೂ ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಹಿರಿಯ ಸಾಹಿತಿ
ಮಡಿಕೇರಿ, ಸೆ.22 : ಪ್ರತಿಯೊಂದು ಧರ್ಮಗ್ರಂಥ ಮತ್ತು ಪುರಾಣಗಳ ಬಗ್ಗೆ ಅರಿತುಕೊಂಡಾಗ ಮಾತ್ರ ಆಯಾ ಧರ್ಮಗಳ ಆಂತರಿಕ ವಿಷಯಗಳನ್ನು ತಿಳಿಯಲು ಸಾಧ್ಯ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ನ ಅಧ್ಯಕ್ಷ ಹಾಗೂ ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕÀ ಬಿ.ಜಿ.ಅನಂತಶಯನ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊಡವ ಮಕ್ಕಡ ಕೂಟ ಹಾಗೂ ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಹಿರಿಯ ಸಾಹಿತಿ ಸಂಭವಿಸಿದÀ ಅತಿವೃಷ್ಟಿ ಹಾನಿಯ ಸಂದರ್ಭ ಜಾತಿ, ಮತ ಭೇದವಿಲ್ಲದೆ ಸರ್ವಧರ್ಮೀಯರು ಒಗ್ಗೂಡಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿರುವದು ಶ್ಲಾಘನೀಯವೆಂದರು.
ಬರಹಗಾರ್ತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ಕೊಡವ ಭಾಗವತದಲ್ಲಿ ಬರುವ ಕೃಷ್ಣ ಪಾತ್ರದ ಬಗ್ಗೆ ವಿವರಿಸಿದರು. ಹಿರಿಯರು ಈ ರೀತಿಯ ಪುಸ್ತಕಗಳನ್ನು ಕಿರಿಯರಿಗೆ ಪರಿಚಯಿಸುವ ಕೆಲಸವಾಗಬೇಕು. ಪ್ರತಿಯೊಬ್ಬರೂ ಕೊಡಗು ಹಾಗೂ ಕೊಡವಾಮೆ ಬಗ್ಗೆ ಅಭಿಮಾನ ಹೊಂದಬೇಕೆಂದು ಕರೆ ನೀಡಿದರು. ಜನರಲ್ ತಿಮ್ಮಯ್ಯ ಶಾಲೆಯ ಪ್ರಾಂಶುಪಾಲೆ ಕಲ್ಲುಮಾಡಂಡ ಸರಸ್ವತಿ ಸುಬ್ಬಯ್ಯ ಮಾತನಾಡಿ, ಕೊಡವ ಮಕ್ಕಡ ಕೂಟ ಹಾಗೂ ಪೊಮ್ಮಕ್ಕಡ ಕೂಟ ಸಂಸ್ಕøತಿ ಆಚಾರ, ವಿಚಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಕೂಟವು ಕೊಡವ ಸಂಸ್ಕøತಿಯನ್ನು ಉಳಿಸಿ ಬೆಳೆಸುವದರೊಂದಿಗೆ ಕೊಡವ ಸಾಹಿತ್ಯಕ್ಕೂ ಉತ್ತೇಜನ ನೀಡುತ್ತಿದೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯನ್ನು ತುಂಬುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಹಾಗೂ ಪೊಮ್ಮಕ್ಕಡ ಕೂಟದ ಸಹಯೋಗದಲ್ಲಿ ನಡೆದ ಕೊಡವ ತೀನಿ ನಮ್ಮೆಯ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.
ಪೊಮ್ಮಕ್ಕಡ ಕೂಟದ ಸದಸ್ಯೆ ಉಳ್ಳಿಯಡ ಸಚಿತ ಗಂಗಮ್ಮ ಪ್ರಾರ್ಥಿಸಿ, ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ದರು. ಕಲಿಯಂಡ ಜೀಜಾ ಅಚ್ಚಪ್ಪ ವಂದಿಸಿ, ಕಾಳೇಂಗಡ ಸಾವಿತ್ರಿ ನಿರೂಪಿಸಿ, ಚೋಕೀರ ಅನಿತಾ ದೇವಯ್ಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರನ್ನು ಪರಿಚಯಿಸಿದರು. ಕೊಡವ ಮಕ್ಕಡ ಕೂಟ ಹಾಗೂ ಪೊಮ್ಮಕ್ಕಡ ಕೂಟದ ಸದಸ್ಯರು ಉಪಸ್ಥಿತರಿದ್ದರು.