ಮಡಿಕೇರಿ, ಸೆ. 22: ಮುಂಗಾರಿನ ಮಹಾಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಮನೆ ಮತ್ತು ಆಸ್ತಿಪಾಸ್ತಿಗಳಿಗೆ ಉಂಟಾದ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಪತ್ರಕರ್ತ, ಮಕ್ಕಂದೂರಿನ ನಿವಾಸಿ ಕುಡೆಕಲ್ ಸಂತೋಷ್ರಿಗೆ ಕೊಡಗು ಪತ್ರಿಕಾ ಭವನ ಟ್ರಸ್ಟ್ನಿಂದ 10 ಸಾವಿರ ರೂ.ಗಳ ನೆರವಿನ ಚೆಕ್ನ್ನು ಹಸ್ತಾಂತರಿಸಲಾಯಿತು.
ನಗರದ ಪತ್ರಿಕಾ ಭವನದ ಪತ್ರಿಕಾ ಭವನ ಟ್ರಸ್ಟ್ ಕಚೇರಿಯಲ್ಲಿ ಕುಡೆಕಲ್ ಸಂತೋಷ್ರಿಗೆ ನೆರವಿನ ಚೆಕ್ನ್ನು ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನು ಶೆಣೈ ಅವರು ಹಸ್ತಾಂತರಿಸಿದರು. ಶಕ್ತಿ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವ ಹಿಸುತ್ತಿರುವ ಕುಡೆಕಲ್ ಸಂತೋಷ್ ಅವರ ಮಕ್ಕಂದೂರಿನ ಮನೆ ಮತ್ತು ತೋಟ ಮಹಾ ಮಳೆಯಿಂದ ಹಾನಿಗೊಳಗಾಗಿದೆ. ಇದನ್ನು
ಪರಿಗಣಿಸಿ ಅವರಿಗೆ ಟ್ರಸ್ಟ್ನಿಂದ ನೆರವನ್ನು ನೀಡಲಾಯಿತು.
ಈ ಸಂದರ್ಭ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಖಜಾಂಚಿ ಎಂ.ಪಿ. ಕೇಶವ ಕಾಮತ್, ಟ್ರಸ್ಟಿಗಳಾದ ಟಿ.ಪಿ. ರಮೇಶ್, ಜಿ. ಚಿದ್ವಿಲಾಸ್, ಕೊಟ್ಟಿಯಂಡ ಜೀವನ್ ಚಿಣ್ಣಪ್ಪ, ಕೆ.ತಿಮ್ಮಪ್ಪ, ಶ್ರೀಧರ್ ಹೂವಲ್ಲಿ, ಮಧೋಷ್ ಪೂವಯ್ಯ, ವ್ಯವಸ್ಥಾಪಕಿ ಯಮುನಾ ಹಾಜರಿದ್ದರು.
ಪತ್ರ್ರಿಕಾ ಭವನದ ಸಿಬ್ಬಂದಿ, ನಗರದ ಚಾಮುಂಡೇಶ್ವರಿ ನಗರದ ನಿವಾಸಿ ಮೆಹರುನ್ನೀಸ ಅವರ ಮನೆ ಭಾರೀ ಮಳೆಗೆ ಹಾನಿಗೆ ಒಳಗಾಗಿದ್ದು, ಸಂಕಷ್ಟದಲ್ಲಿರುವ ಮೆಹರುನ್ನೀಸ ಅವರಿಗೂ ಟ್ರಸ್ಟ್ಟ್ನಿಂದ 5 ಸಾವಿರ ರೂ.ಗಳ ನೆರವನ್ನು ನೀಡಲಾಗಿದೆ.