ಗೋಣಿಕೊಪ್ಪಲು, ಸೆ. 22: ಗಾಂಧೀಜಿಯವರ ಕನಸಿನ ಕೂಸಿನಂತೆ ಕೇಂದ್ರ ಸರ್ಕಾರವು ಹಮ್ಮಿಕೊಂಡಿರುವ ಸ್ವಚ್ಛತಾ ಆಂದೋಲನವನ್ನು ಇಲ್ಲಿಗೆ ಸಮೀಪದ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಸುಮಾರು 15 ದಿನಗಳ ಕಾಲ ಕೈಗೊಳ್ಳಲಾಯಿತು. ಸ್ವಚ್ಛತಾ ಗೀತೆಯೊಂದಿಗೆ ಶಾಲಾ ಸಂಸ್ಥಾಪಕಿ ಶಾಂತಿ ಅಚ್ಚಪ್ಪ ಹಾಗೂ ಪ್ರಾಂಶುಪಾಲ ಅರುಣ್‍ಕುಮಾರ್ ಎಸ್. ಆಂದೋಲನಕ್ಕೆ ಚಾಲನೆ ನೀಡಿದರು.

ಆರೋಗ್ಯ ಪರಿಸರಕ್ಕಾಗಿ ಸ್ವಚ್ಛತಾ ಪರಿಕಲ್ಪನಾ ದಿನ, ಸ್ವಚ್ಛವಾಗಿ ಕೈ ತೊಳೆದುಕೊಳ್ಳುವ ದಿನ, ವೈಯಕ್ತಿಕ ಆರೋಗ್ಯ ಹಿತರಕ್ಷಣಾ ದಿನ, ಸಾಮೂಹಿಕ ಪಾಲ್ಗೊಳ್ಳುವಿಕೆ ದಿನ, ವಸ್ತು ಪ್ರದರ್ಶನ ದಿನ, ಸ್ವಚ್ಛ ಹಾಗೂ ಶುದ್ಧಜಲ ದಿನ, ಪತ್ರಲೇಖನ ದಿನಗಳೆಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಲವು ಜಾಗೃತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದರು. ಶಾಲೆಯ ಸಮೀಪ ವಿವಿಧ ಬಡಾವಣೆಗಳಿಗೆ ಭೆÉೀಟಿ ನೀಡಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುವ ಮೂಲಕ ಜನಸಾಮಾನ್ಯರಿಗೆ ಸ್ವಚ್ಛತೆಯ ಕುರಿತಾಗಿ ಜಾಗೃತಿ ಮೂಡಿಸಿದರು. ವಿಜ್ಞಾನ ಶಿಕ್ಷಕಿಯರಾದ ಕಾವ್ಯ ಸಿ.ಜಿ., ಅರ್ಪಿತಾ, ರೇಖಾ ಕೆ. ಹಾಗೂ ಯಾಮಿನಿರವರ ನೇತ್ರತ್ವದಲ್ಲಿ ಸ್ವಚ್ಛತೆಯ ಕುರಿತು ಬಣ್ಣ ಹಚ್ಚುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಬೆಸ್ಟ್ ಔಟ್ ಆಫ್ ವೇಸ್ಟ್ (ಕಸದಿಂದ ರಸ) ಸ್ಪರ್ಧೆ, ವಿವಿಧ ಘೋಷಣಾ ಫಲಕ ರಚನಾ ಸ್ಪರ್ಧೆ, ಅಂತರ್-ತರಗತಿ ವಸ್ತು ಪ್ರದರ್ಶನ ಸ್ಪರ್ಧೆಗಳನ್ನು ನಡೆಸುವ ಮೂಲಕ ವಿವಿಧ ಜಾಗೃತಿಗಳನ್ನು ಹಮ್ಮಿಕೊಳ್ಳಲಾಯಿತು. ಆನಂತರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದೊಂದಿಗೆ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಪರಿಸಮಾಪ್ತಿ ಎಳೆಯಲಾಯಿತು. ಸ್ವಚ್ಛತಾ ಕಾರ್ಯಕ್ರಮ ಕೇವಲ ಈ ಆಂದೋಲನಕ್ಕೆ ಸೀಮಿತವಾಗದೆ ದಿನಂಪ್ರತಿಯು ಆಚರಣೆಯಲ್ಲಿರ ಬೇಕೆಂದು ವಿದ್ಯಾರ್ಥಿಗಳು ಶಪಥ ಕೈಗೊಂಡರು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಭಾಗಿಯಾಗಿದ್ದರು.