ಸೋಮವಾರಪೇಟೆ, ಸೆ. 22: ಇಲ್ಲಿನ ಬಸವೇಶ್ವರ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
ಅಂಗನವಾಡಿ ವ್ಯಾಪ್ತಿಗೆ ಒಳಪಡುವ ಗರ್ಭಿಣಿ ಸ್ತ್ರೀಯರಿಗೆ ಅರಿಶಿಣ ಕುಂಕುಮ, ಬಳೆ ನೀಡಿ ಮಡಿಲು ತುಂಬಿಸಲಾಯಿತು. ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶೀಲಾ, ಅಂಗನವಾಡಿ ಕಾರ್ಯಕರ್ತೆ ಜಗದಾಂಭ, ಜೇಸೀರೇಟ್ ಅಧ್ಯಕ್ಷೆ ಮಾಯಾ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.