*ಗೋಣಿಕೊಪ್ಪಲು, ಸೆ. 22: ಇಲ್ಲಿಗೆ ಸಮೀಪದ ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಕಾಂಡನಕೊಲ್ಲಿ, ಮಕ್ಕಂದೂರು ಉದಯಗಿರಿ, ಕಾಲೂರು ಹಾಗೂ ಮಡಿಕೇರಿ ಸಮೀಪದ ಕೆಲ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮೀಕ್ಷೆಯನ್ನು ಕೈಗೊಂಡಿದ್ದರು. ಸಮೀಕ್ಷೆಯ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್, ರೀತಾ ಎನ್.ಪಿ., ಉಪನ್ಯಾಸಕಿ ಪವಿತ್ರ, ಗ್ರಂಥಾಲಯ ಸಹಾಯಕರಾದ ಚೆನ್ನನಾಯಕ್, ಕಚೇರಿ ಸಹಾಯಕರಾದ ಚೆಲುವ ಮತ್ತು ವಸಂತಿ ಈ ಕಾರ್ಯದಲ್ಲಿ ಭಾಗವಹಿಸಿದ್ದರು.