q ನವರಾತ್ರಿಯಿಂದ ನಿತ್ಯಪೂಜೆ q ತಾಂಬೂಲ ಪ್ರಶ್ನೆಯಲ್ಲಿ ನಿರ್ಣಯ

ಮಡಿಕೇರಿ, ಸೆ. 22: ಪ್ರಾಕೃತಿಕ ವಿಕೋಪದಿಂದ ಜಲಾವೃತಗೊಂಡು ಮುಳುಗಡೆಯಾಗಿದ್ದ ಮುಕ್ಕೋಡ್ಲು ವ್ಯಾಪ್ತಿಯ ಮೇಘತ್ತಾಳು ಶ್ರೀ ಭದ್ರಕಾಳೇಶ್ವರಿ ದೇವಾಲಯ ಆವರಣದಲ್ಲಿ ತಾ. 27 ರಂದು ಕರಸೇವೆ ಮೂಲಕ ಸ್ವಚ್ಛಗೊಳಿಸುವದರೊಂದಿಗೆ ನವರಾತ್ರಿ ಆರಂಭ ದಿನದಿಂದ ಮತ್ತೆ ನಿತ್ಯಪೂಜೆ ಪ್ರಾರಂಭಿಸಲು ನಿರ್ಧರಿಸಲಾಯಿತು.

ನಿನ್ನೆ ದೇವರ ಸನ್ನಿಧಿಯಲ್ಲಿ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆಯೊಂದಿಗೆ ಗ್ರಾಮಸ್ಥರ ಸಮ್ಮುಖ ಈ ನಿರ್ಣಯ ಕೈಗೊಳ್ಳಲಾಯಿತು.

ಮುಕ್ಕೋಡ್ಲು ಗ್ರಾಮಸ್ಥರೊಂದಿಗೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ತಾ. 27 ರಂದು ನಡೆಯಲಿರುವ ಸ್ವಚ್ಛತಾ ಕಾರ್ಯಕ್ಕೆ ಕರಸೇವೆ ಮುಖಾಂತರ ಕೈಜೋಡಿಸುವದಾಗಿ ಇದೇ ವೇಳೆ ಮಡಿಕೇರಿ, ಸೆ. 22: ಪ್ರಾಕೃತಿಕ ವಿಕೋಪದಿಂದ ಜಲಾವೃತಗೊಂಡು ಮುಳುಗಡೆಯಾಗಿದ್ದ ಮುಕ್ಕೋಡ್ಲು ವ್ಯಾಪ್ತಿಯ ಮೇಘತ್ತಾಳು ಶ್ರೀ ಭದ್ರಕಾಳೇಶ್ವರಿ ದೇವಾಲಯ ಆವರಣದಲ್ಲಿ ತಾ. 27 ರಂದು ಕರಸೇವೆ ಮೂಲಕ ಸ್ವಚ್ಛಗೊಳಿಸುವದರೊಂದಿಗೆ ನವರಾತ್ರಿ ಆರಂಭ ದಿನದಿಂದ ಮತ್ತೆ ನಿತ್ಯಪೂಜೆ ಪ್ರಾರಂಭಿಸಲು ನಿರ್ಧರಿಸಲಾಯಿತು.

ನಿನ್ನೆ ದೇವರ ಸನ್ನಿಧಿಯಲ್ಲಿ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆಯೊಂದಿಗೆ ಗ್ರಾಮಸ್ಥರ ಸಮ್ಮುಖ ಈ ನಿರ್ಣಯ ಕೈಗೊಳ್ಳಲಾಯಿತು.

ಮುಕ್ಕೋಡ್ಲು ಗ್ರಾಮಸ್ಥರೊಂದಿಗೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ತಾ. 27 ರಂದು ನಡೆಯಲಿರುವ ಸ್ವಚ್ಛತಾ ಕಾರ್ಯಕ್ಕೆ ಕರಸೇವೆ ಮುಖಾಂತರ ಕೈಜೋಡಿಸುವದಾಗಿ ಇದೇ ವೇಳೆ ದೇವಿಯ ಚರಿತ್ರೆ: ಒಂದೊಮ್ಮೆ ರಾಜರ ಕಾಲದಲ್ಲಿ ಹಾಲೇರಿಯ ಶ್ರೀ ಭದ್ರಕಾಳಿ ಸನ್ನಿಧಿಗೆ ಮುಕ್ಕೋಡ್ಲು ಸೇರಿದಂತೆ ಮೇಘತ್ತಾಳು ಹಾಗೂ ಇತರ ಗ್ರಾಮಗಳನ್ನು ಒಳಗೊಂಡಿದ್ದ ದೇವತಾ ಕೈಂಕರ್ಯಗಳು ನಡೆದುಕೊಂಡು ಬಂದಿದ್ದು, ಹತ್ತುಗಟ್ಟು ಹಾಲೇರಿ ನಾಡು ವಿಭಜನೆಗೊಂಡು, ಅನಂತರದಲ್ಲಿ ಪ್ರತ್ಯೇಕ ಬದಿಗೇರಿ ನಾಡಾಗಿ ಏಕವ್ಯವಸ್ಥೆಯಿಂದ ಕೆಲವು ಗ್ರಾಮಗಳು ಬೇರ್ಪಟ್ಟಿರುವ ಸುಳಿವು ಪ್ರಶ್ನೆಯಲ್ಲಿ ಗೋಚರಿಸಿತು.

ಅಲ್ಲದೆ ಈಗಿರುವ ಮೇಘತ್ತಾಳು ಶ್ರೀ ಭದ್ರಕಾಳೇಶ್ವರಿ ಸನ್ನಿಧಿ ಹಾಗೂ ಹಾಲೇರಿ ಶ್ರೀ ಭದ್ರಕಾಳೇಶ್ವರಿ ಸನ್ನಿಧಿ ಬಗ್ಗೆ ಜಿಜ್ಞಾಸೆಯಿದ್ದು, ಶಿವ ಸಾನಿಧ್ಯವು ಕಾಲಾ ನಂತರದಲ್ಲಿ ದೇವಿ ಹೆಸರಿನಲ್ಲಿ ಆರಾಧನೆಗೆ ಒಳಪಟ್ಟಿರುವ ಅಂಶ ಗೋಚರಿಸಿತು.

ಹೀಗಾಗಿ ನವರಾತ್ರಿಯಿಂದ 48 ದಿನಗಳ ಪೂಜೆ ಬಳಿಕ ಭವಿಷ್ಯದಲ್ಲಿ ಅಷ್ಟಮಂಗಲ ಪ್ರಶ್ನೆ ಮುಖಾಂತರ ಒಟ್ಟಾರೆ ಕ್ಷೇತ್ರದ ಚರಿತ್ರೆಯನ್ನು ವಿಮರ್ಶಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಈ ವೇಳೆ ನಾಡು ತಕ್ಕರಾದ ಶಾಂತೆಯಂಡ ಕುಟುಂಬದ ಉತ್ತಯ್ಯ, ಅಯ್ಯಪ್ಪ ದೇವರ ತಕ್ಕ ಕಾಳಚಂಡ ಪಿ. ಪೊನ್ನಪ್ಪ, ಬೊಟ್ಲಪ್ಪ ಸನ್ನಿಧಿ ತಕ್ಕ ಕನ್ನಿಕಂಡ ಡಾಲು, ಕಾಟೋಳಪ್ಪ ದೇವ ತಕ್ಕ ಹಂಚೆಟ್ಟಿರ ಚಂಗಪ್ಪ ಹಾಗೂ ಶ್ರೀ ಭದ್ರಕಾಳೇಶ್ವರಿ ತಕ್ಕ ಮಾನಡ್ಕನ ಬೋಪಯ್ಯ ಸೇರಿದಂತೆ ಶಾಂತೆಯಂಡ ರವಿ ಕುಶಾಲಪ್ಪ, ಅಚ್ಚಯ್ಯ ಸಹಿತ ಗ್ರಾಮದ ಹಿರಿಯರು, ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ, ಹಿಂ.ಜಾ.ವೇ. ಪ್ರಮುಖರು ಪಾಲ್ಗೊಂಡಿದ್ದರು.