ಮಡಿಕೇರಿ, ಸೆ.20 : ಕೊಡಗು ಜಿಲ್ಲೆಯಲ್ಲಿ ಮುಂಗಾರಿನ ಅವಧಿಯಲ್ಲಿನ ಭಾರೀ ಮಳೆಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪವನ್ನು ಕೇವಲ ಮಳೆ ಹಾನಿ ಎಂದು ಪರಿಗಣಿಸದೆ, ‘ರಾಷ್ಟ್ರೀಯ ಮಹಾ ವಿಪತ್ತು’ ಎಂದು ಘೋಷಿಸಿ ಸಂತ್ರಸ್ತರಿಗೆ ಅಗತ್ಯ ನೆರವನ್ನು ಕಲ್ಪಿಸಬೇಕೆಂದು ಮದೆನಾಡು ಗ್ರಾಮಸ್ಥ ಹಾಗೂ ಕಾವೇರಿಸೇನೆ ಸಂಘಟನೆಯ ಜಿಲ್ಲಾ ಸಂಚಾಲಕ ರವಿಚಂಗಪ್ಪ ಆಗ್ರಹಿಸಿದ್ದಾರೆ.

ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿರುವ ಗ್ರಾಮಗಳನ್ನು ‘ಹಾನಿ ಪೀಡಿತ’ ಗ್ರಾಮಗಳೆಂದು ಘೋಷಿಸಿ, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ವಿಶೇಷ ಪ್ಯಾಕೇಜ್ ಘೋಷಿಸ ಬೇಕೆಂದು ಒತ್ತಾಯಿಸಿದ ರವಿ ಚಂಗಪ್ಪ, ಪ್ರಸ್ತುತ ಮಳೆÉ ಹಾನಿ ಪರಿಹಾರವಾಗಿ ಕುಸಿದ ತೊಟಗಳಿಗೆ ಪ್ರತಿ ಹೆಕ್ಟೇರ್‍ಗೆ ಕೇವಲ 35 ಸಾವಿರ ರೂ. ಪರಿಹಾರ ವನ್ನು ಒದಗಿಸುವದು ಉಚಿತವಲ್ಲ. ಬದುಕಿಗೆ ಆಧಾರವಾದ ತೋಟ ಗದ್ದೆಗಳ ನಾಶವಾಗಿ ಅತಂತ್ರ ಸ್ಥಿತಿಯಲ್ಲಿ ರುವವರಿಗೆ ಅವರು ಕಳೆÉದುಕೊಂಡ ಪ್ರತಿ ಎಕರೆ ಜಾಗಕ್ಕೆ 25 ಲಕ್ಷ ರೂ. ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿದರು.ಪ್ರಾಕೃತಿಕ ವಿಕೋಪದಿಂದ ಮನೆಕಳೆÉದುಕೊಂಡ ಸಂತ್ರಸ್ತರಿಗೆ ಬದಲಿ ಜಾಗವನ್ನು ಸರ್ಕಾರ ನೀಡುವದ ರೊಂದಿಗೆ ಮನೆ ನಿರ್ಮಿಸಿಕೊಡಬೇಕು. ಸಂತ್ರಸ್ತ ಬಯಸಿದಲ್ಲಿ ಸ್ವತಃ ಮನೆ ನಿರ್ಮಿಸಿಕೊಳ್ಳಲು ಕನಿಷ್ಟ 20 ಲಕ್ಷ ರೂ.ಗಳ ನೆರವನ್ನು ಒದಗಿಸಬೇಕು ಮತ್ತು ಇದರ ಆಯ್ಕೆಯನ್ನು ಸಂತ್ರಸ್ತರಿಗೆ ಬಿಡಬೇಕೆಂದು ಒತ್ತಾಯಿಸಿದರು.

ತೀವ್ರ ಸ್ವರೂಪದ ಹಾನಿಗಳಿಗೆ ಒಳಗಾಗಿರುವ ಗ್ರಾಮಗಳ ಜನತೆಯ ಸಾಲಗಳೆಲ್ಲವನ್ನು ಮನ್ನಾ ಮಾಡಬೇಕು ಮತ್ತು ಮುಂದಿನ 5 ವರ್ಷಗಳ ಕಾಲ ವಸೂಲಾತಿ ಮಾಡದ, ಬಡ್ಡಿ ರಹಿತ ಮರು ಸಾಲವನ್ನು ಒದಗಿಸಬೇಕು, ಸಂತ್ರಸ್ತರ ಮಕ್ಕಳ ಶಿಕ್ಷಣದ ಸಂಪÀÇರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾದ ಸಂತ್ರಸ್ತರಿಗೆ ಮುಂದಿನ 5 ವರ್ಷಗಳ ಕಾಲ ಪ್ರತಿ ತಿಂಗಳಿಗೆ 15 ಸಾವಿರ ರೂ.ಗಳಂತೆ ಕುಟುಂಬ ನಿರ್ವಹಣಾ ವೆಚ್ಚವನ್ನು ಸರ್ಕಾರ ಒದಗಿಸಬೇಕೆಂದು ಆಗ್ರಹಿಸಿದರು.

ಗ್ರಾಮಸ್ಥರ ಸಾಂಸ್ಕøತಿಕ ಬದುಕಿನ ಹಿನ್ನೆಲೆಗೆ ಧಕ್ಕೆಯಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಂಡು, ಗ್ರಾಮಗಳಲ್ಲಿ ವೃತ್ತಿ ಕೌಶಲ್ಯಗಳಿಗೆ ಅಗತ್ಯ ಮಾರ್ಗದರ್ಶನ ನೀಡುವದರೊಂದಿಗೆ, ಹೈನುಗಾರಿಕೆ, ಕೋಳಿ, ಹÀಂದಿ, ಕುರಿ ಸಾಕಾಣೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸಂತ್ರಸ್ತರ ಹೊಸ ಬದುಕಿಗೆ ಹಾದಿಯನ್ನು ತೋರಬೇಕೆಂದು ರವಿಚಂಗಪ್ಪ ಹೇಳಿದರು.

ಮನೆ ಇದ್ದವರೂ ಇದ್ದಾರೆ

ಪರಿಹಾರ ಕೇಂದ್ರ್ರಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಮೇಲೆ ಸಂತ್ರಸ್ತರು ಹಲ್ಲೆ ನಡೆಸುತ್ತಿರುವ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ ರವಿ ಚಂಗಪ್ಪ, ಸುಸ್ಥಿಯಲ್ಲಿರುವ ಮನೆಗಳನ್ನು ಹೊಂದಿರುವ ಸಂತ್ರಸ್ತರನ್ನು ಪರಿಹಾರ ಕೇಂದ್ರಗಳಲ್ಲಿ ಗುರುತಿಸಿ, ಅವರನ್ನು ತಕ್ಷಣ ಮನೆಗೆ ಕಳುಹಿಸಲು ಕ್ರಮ ಕೈಗೊಳ್ಳುವಂತೆಯೂ ರವಿ ಚಂಗಪ್ಪ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರಾದ ಶಾಂತೆಯಂಡ ಸನ್ನಿ ಪೂವಯ್ಯ, ಕಾಲೂರಿನ ಕೊಳುಮಾಡಂಡ ದೇವಯ್ಯ, ಹೆಮ್ಮೆತ್ತಾಳು ಗ್ರಾಮದ ಪೆಮ್ಮುಡಿಯಂಡ ವಿಶು ಪೆಮ್ಮಯ್ಯ ಹಾಗೂ ಮಕ್ಕಂದೂರು ಗ್ರಾಮದ ಕುಂಬುಗೌಡನ ಪ್ರಸನ್ನ ಉಪಸ್ಥಿತರಿದ್ದರು.