ಕೂಡಿಗೆ, ಸೆ. 18: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಯ ಕೈಗಾರಿಕಾ ಬಡಾವಣೆ ಸಮೀಪದ ಚಿಕ್ಕತ್ತೂರು ಗ್ರಾಮದ ಲಿಂಗರಾಜು ಅವರ ಹಾಲೋ ಬ್ರಿಕ್ ಇಟ್ಟಿಗೆ ಫ್ಯಾಕ್ಟರಿಯ ಲೈನ್ ಮನೆಯಲ್ಲಿ ಕತ್ತಿಯಿಂದ ತಲೆಗೆ ಕಡಿದ ಘಟನೆ ನಡೆದಿದೆ. ಇಲ್ಲಿನ ಕಾರ್ಮಿಕ ಉತ್ತರ ಪ್ರದೇಶದ ಪಾಸ್ನನ್ ಎಂಬವರಿಗೆ ಮತ್ತೋರ್ವ ಕಾರ್ಮಿಕ ರಾಜ ಎಂಬಾತ ಕತ್ತಿಯಿಂದ ತಲೆಗೆ ಕಡಿದು ಗಾಯಗೊಳ್ಳಿಸಿದ್ದಾನೆ. ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ರಾಜ ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.