ವೀರಾಜಪೇಟೆ, ಸೆ. 17: ತಾಲೂಕಿನ ಕಂಡಂಗಾಲ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗಿನ ಒಟ್ಟು 50 ವಿದ್ಯಾರ್ಥಿಗಳಿಗೆ ಸುಮಾರು ರೂ. 8,000 ಮೌಲ್ಯದ ಶಾಲಾ ಬ್ಯಾಗುಗಳನ್ನು ಊರಿನ ದಾನಿಗಳಾದ ಕೆ.ಎಂ. ಧರ್ಮಜ ದೇವಯ್ಯ ಅವರು ವಿತರಣೆ ಮಾಡಿದರು.

ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಕೆ.ಎಸ್. ಕುಸುಮ, ಸದಸ್ಯರಾದ ವಿಜು, ಕುಮಾರ್, ಜಯಂತಿ, ಮಹಾದೇವ, ಭೂದಾನಿಗಳಾದ ಮೂಕಚಂಡ ಪ್ರಸನ್ನ, ಶಿಕ್ಷಣ ತಜ್ಞ ಕೊಂಗಂಡ ಡಬ್ಲ್ಯೂ ಭೀಮಯ್ಯ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಅಡುಗೆ ಸಿಬ್ಬಂದಿಯವರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.