*ಗೋಣಿಕೊಪ್ಪ, ಸೆ. 17 : ವೀರಾಜಪೇಟೆ -ಕೂಟುಹೊಳೆ ಮಾರ್ಗ ಸಂಚಾರಕ್ಕೆ ಮಿನಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಅಧಿಕಾರಿಗೆ ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು.

ಪೊನ್ನಂಪೇಟೆ ಶಾಸÀಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೀರಾಜಪೇಟೆಯಿಂದ ಕೂಟುಹೊಳೆಗೆ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಇದರಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಖಾಸಗಿ ವಾಹನಗಳು ಪ್ರಯಾಣಿಕರಿಂದ ಹೆಚ್ಚು ಹಣ ಪಡೆದುಕೊಳ್ಳುತ್ತಾರೆಂದು ಸಾರ್ವಜನಿಕರ ಆರೋಪವಿದ್ದು, ಇದನ್ನು ಪರಿಗಣಿಸಿ ಮಿನಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗೆ ಸೂಚಿಸಿದರು. ಈಗಾಗಲೇ ಈ ಮಾರ್ಗದಲ್ಲಿ ಮಿನಿ ಬಸ್ ಸಂಚಾರ ಮಾಡಬಹುದು ಎಂದು ಪಿ.ಡಬ್ಲ್ಯು.ಡಿ. ಇಲಾಖೆ ತಿಳಿಸಿದೆ. ಶಾಸಕರ ಸೂಚನೆಯ ಮೇರೆಗೆ ಸಂಚಾರ ಮಾರ್ಗವನ್ನು ಪರಿಶೀಲಿಸಲು ಪುತ್ತೂರು ವಿಭಾಗದ ರಸ್ತೆ ಸಾರಿಗೆ ಸಂಸ್ಥೆಯ ಡಿಸಿ ಬೇಟಿ ನೀಡಿ ಸಂಚಾರಕ್ಕೆ

ಅನುಕೂಲ ಕಲ್ಪಿಸಲು ಸರ್ವೆ ನಡೆಸಿ ಅತಿ ಶೀಘ್ರದಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವದಾಗಿ ತಿಳಿಸಿದ್ದಾರೆ ಎಂದು ಶಾಸಕರು ಮಾಹಿತಿಯಿತ್ತರು.