ಮಡಿಕೇರಿ, ಸೆ. 17: ಕುಶಾಲನಗರದ ಶ್ರೀ ಇಗ್ಗುತಪ್ಪ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್‍ನ ವಾರ್ಷಿಕ ಮಹಾಸಭೆ ಸಂಘದ ಕಟ್ಟಡದಲ್ಲಿ ನಡೆಯಿತು. ಮಹಾಸಭೆಯಲ್ಲಿ 2018-19 ಹಾಗೂ 2019-20ನೇ ಅವಧಿಗೆ ನೂತನ ಪದಾಧಿಕಾರಿಗಳು ಆಯ್ಕೆಯಾದರು.

ಅಧ್ಯಕ್ಷರಾಗಿ ಕರ್ನಂಡ ಅರುಣ್ ಮೊಣ್ಣಪ್ಪ, ಉಪಾಧ್ಯಕ್ಷರಾಗಿ ಜಗ್ಗ ಪೂವಯ್ಯ, ಕಾರ್ಯದರ್ಶಿ ಮೇವಡ ಮಧು ಮಾದಯ್ಯ, ಸಹ ಕಾರ್ಯದರ್ಶಿ ಮಣವಟ್ಟಿರ ಸಂತೋಷ್, ಖಜಾಂಚಿ ಅಂಜಪರವಂಡ ನಳಿನಿ ನಂಜಪ್ಪ, ಕ್ರೀಡಾ ಕಾರ್ಯದರ್ಶಿ ಮಾಳೇಟಿರ ಪೂಣಚ್ಚ, ನಿರ್ದೇಶಕರಾಗಿ ಪಟ್ಟಡ ವೇಣು, ಮೂಕೋಂಡ ರಾಜ್ ಭೀಮಯ್ಯ, ಮೂವೆರ ಗಣೇಶ್, ವಾಂಚಿರ ಮನು ನಂಜುಂಡ, ಮಂಡೇಪಂಡ ಚಿಮ್ಮ ಉತ್ತಪ್ಪ, ಅಪ್ಪಚೆಟ್ಟೋಳಂಡ ಅಜಿತ್ ಅಚ್ಚಯ್ಯ, ಉಡುವೆರ ಹ್ಯಾರಿ ಚಿಟ್ಟಿಯಪ್ಪ, ಬಾಚರಣಿಯಂಡ ರಾಣೂ ಅಪ್ಪಣ್ಣ, ಚೋವಂಡ ಅನಿತ ಅಯ್ಯಪ್ಪ ನೇಮಕಗೊಂಡಿದ್ದಾರೆ.