ಕುಶಾಲನಗರ, ಸೆ. 17: ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರ ಬೆಳೆಗೆ ನೀರಿಲ್ಲದೆ ಅನಾನುಕೂಲ ಉಂಟಾಗಿದೆ ಎಂದು ಕೂಡುಮಂಗಳೂರು ಏತ ನೀರಾವರಿ ನೀರು ಬಳಕೆದಾರರ ಸಂಘದ ರೈತರು ಆರೋಪಿಸಿದ್ದಾರೆ.

ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಕೂಡ್ಲೂರು ಗ್ರಾಮದಲ್ಲಿರುವ ಏತ ನೀರಾವರಿ ಯೋಜನೆ ಮೂಲಕ ಕಳೆದ ಎರಡು ವರ್ಷಗಳಿಂದ ಈ ವ್ಯಾಪ್ತಿಯ ಕುಶಾಲನಗರ, ಸೆ. 17: ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರ ಬೆಳೆಗೆ ನೀರಿಲ್ಲದೆ ಅನಾನುಕೂಲ ಉಂಟಾಗಿದೆ ಎಂದು ಕೂಡುಮಂಗಳೂರು ಏತ ನೀರಾವರಿ ನೀರು ಬಳಕೆದಾರರ ಸಂಘದ ರೈತರು ಆರೋಪಿಸಿದ್ದಾರೆ.

ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಕೂಡ್ಲೂರು ಗ್ರಾಮದಲ್ಲಿರುವ ಏತ ನೀರಾವರಿ ಯೋಜನೆ ಮೂಲಕ ಕಳೆದ ಎರಡು ವರ್ಷಗಳಿಂದ ಈ ವ್ಯಾಪ್ತಿಯ ರೈತರು ಕೂಡ ತಮ್ಮ ಜಮೀನುಗಳನ್ನು ಮಾರಾಟ ಮಾಡಿ ಸಂಕಷ್ಟಕ್ಕೆ ಒಳಗಾಗುವ ದುಸ್ಥಿತಿ ನಿರ್ಮಾಣಗೊಂಡಿದೆ ಎಂದು ಸಂಘದ ರೈತ ಮುಖಂಡರಾದ ಕೆ.ಎಸ್.ರಾಜಾಚಾರಿ ತಮ್ಮ ಅಳಲು ತೋಡಿಕೊಂಡರು.

ಅಂದಾಜು 50 ಲಕ್ಷ ರೂ ವೆಚ್ಚದಲ್ಲಿ ಪಂಪ್ ಹೌಸ್‍ಗೆ ನೂತನವಾಗಿ ಎರಡು ಸಬ್ ಮರ್ಸಿಬಲ್ ಮೋಟಾರ್ ಮತ್ತು ಫೈಬರ್ ಪೈಪ್‍ಗಳ ಅಳವಡಿಕೆಗೆ ಸರಕಾರ ಮಂಜೂರಾತಿ ನೀಡಿದೆ. ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ರೈತರ ಜಮೀನುಗಳಿಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಲಾಗಿದೆ. ಯಾವದೇ ನೂತನ ಮೋಟಾರ್ ಅಳವಡಿಸದೆ ಈ ಹಿಂದೆ ಇದ್ದ ಹಳೆಯ ಮೋಟಾರ್ ಹಾಗೂ ಸಿಮೆಂಟ್ ಪೈಪ್‍ಗಳನ್ನೇ ಬಳಸಿ ದುರಸ್ತಿ ಕೈಗೊಂಡಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನಿಸಿದಲ್ಲಿ ಉದ್ದಟತನದಿಂದ ವರ್ತಿಸುತ್ತಾರೆ ಎಂದು ರೈತರಾದ ಕೆ.ಸಿ. ಶ್ರೀನಿವಾಸ್, ಕೆ.ಎಸ್.ಹರೀಶ್, ನಾಗರಾಜ್, ಕೆ.ಟಿ.ರಾಚಪ್ಪ ಮಾಹಿತಿ ನೀಡಿದರು.

ಸರಕಾರದಿಂದ ಮಂಜೂರಾದ ಟೆಂಡರ್ ಪ್ರಕಾರ ಕಾಮಗಾರಿ ನಿರ್ವಹಿಸಬೇಕಿದೆ. ಈಗಾಗಲೆ ನೀರಿಲ್ಲದೆ ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲದಿದ್ದಲ್ಲಿ ರೈತರ ಪ್ರಯೋಜನಕ್ಕೆ ಬಾರದ ಘಟಕವನ್ನು ಮುಚ್ಚುವಂತೆ ಅವರು ಆಗ್ರಹಿಸಿದರು. ಈ ಸಂಬಂಧ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುವದು ಎಂದು ಅವರು ತಿಳಿಸಿದರು.