ಕುಶಾಲನಗರ, ಸೆ. 16: ಗುಜರಾತ್‍ನಲ್ಲಿ ದಲಿತ ಮಹಿಳೆ ದೇವಾಲಯ ಪ್ರವೇಶ ಮಾಡಿದ ಸಂದರ್ಭ ಆಕೆಯನ್ನು ಬೆತ್ತಲೆಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಅತ್ಯಂತ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಬಿ. ರಾಜು ಹೇಳಿದರು.

ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲೇ ಕಂಡರಿಯದ ಅಮಾನುಷ ಪ್ರಕರಣ ಗುಜರಾತ್‍ನಲ್ಲಿ ನಡೆದಿದೆ. ಕೇವಲ ದೇವಾಲಯ ಪ್ರವೇಶ ಮಾಡಿದ ಕಾರಣ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವದು ನಾಗರಿಕ ಸಮಾಜ ತಲ್ಲೆ ತಗ್ಗಿಸುವಂತಹ ವಿಚಾರವಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಅವರು ಆಗ್ರಹಿಸಿದರು.