ಕೂಡಿಗೆ, ಸೆ. 16: ಕೂಡಿಗೆ ಕ್ರೀಡಾಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಮಟ್ಟದ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟಕ್ಕೆ ತಾಲೂಕು ಕ್ರೀಡಾ ಪರಿವೀಕ್ಷಕ ವೆಂಕಟೇಶ್ ಸಾಂಕೇತಿಕವಾಗಿ ಚಾಲನೆ ನೀಡಿದರು.
ಈ ಕ್ರೀಡಾಕೂಟವನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಸೂಚನೆಯಂತೆ ವಲಯ ಮಟ್ಟದಲ್ಲಿ ವಿಜೇತರಾದ ತಂಡಗಳು ಇಂದು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಲಾಂಗ್ಜಂಪ್, ಹೈಜಂಪ್, ಓಟದ ಸ್ಪರ್ಧೆಗಳು, ಶಾಟ್ಪುಟ್ ಹಾಗೂ ಇತರೆ ಕ್ರೀಡಾಕೂಟಗಳಲ್ಲಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ 460 ವಿದ್ಯಾಥಿಗಳು ಪಾಲ್ಗೊಂಡಿದ್ದರು.