ಸೋಮವಾರಪೇಟೆ,ಸೆ.16: ರಾಜ್ಯ ರಸ್ತೆ ಸಾರಿಗೆ ನಿಗ ಮದ ಪುತ್ತೂರು ವಿಭಾಗಕ್ಕೆ ಒಳಪಡುವ ಸೋಮವಾರ ಪೇಟೆಯಲ್ಲಿ ಸಂಚಾರಿ ನಿಯಂತ್ರಕ ರಾಗಿ ಸೇವೆ ಸಲ್ಲಿಸುತ್ತಿರುವ ಅಜ್ಜಮಕ್ಕಡ ಯು. ಕಾರ್ಯಪ್ಪ 2017/18ನೇ ಸಾಲಿನ ಉತ್ತಮ ಸೇವೆಗಾಗಿ ಪ್ರಶಸ್ತಿ ಪಡೆದಿರುತ್ತಾರೆ.

ಸಮೀಪದ ಚೌಡ್ಲು ಕಾನ್ವೆಂಟ್ ಬಾಣೆ ನಿವಾಸಿಯಾಗಿದ್ದು, ಈ ಹಿಂದೆ ಎರಡು ಬಾರಿ ಉತ್ತಮ ನಿರ್ವಾಹಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇವರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿಯನ್ನು ನೀಡಿದ್ದಾರೆ.