ಶನಿವಾರಸಂತೆ, ಸೆ. 16: ಶನಿವಾರಸಂತೆ ಗುಂಡೂರಾವ್ ಬಡಾವಣೆ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಆರೋಪಿಗಳಾದ ಪ್ರತಾಪ್, ಪುಟ್ಟಯ್ಯ, ದೀಪಕ್, ವಿನೋದ ಹಾಗೂ ಪ್ರದೀಪ್ ಅವರುಗಳನ್ನು ಪೊಲೀಸರು ಬಂಧಿಸಿ ರೂ. 1,540 ವಶಪಡಿಸಿಕೊಂಡು ಆರೋಪಿಗಳನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.