ಕುಶಾಲನಗರ, ಸೆ. 16: ಕುಶಾಲನಗರದ ಕೇರಳ ಸಮಾಜದ ಅಧ್ಯಕ್ಷರಾಗಿ ಕೆ.ಆರ್. ಶಿವಾನಂದನ್ ಪುನರಾಯ್ಕೆಯಾಗಿದ್ದಾರೆ. ಸಮಾಜದ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಾಲಿನ ಆಡಳಿತ ಮಂಡಳಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಎಂ.ಜಿ. ಪ್ರಕಾಶ್, ಕಾರ್ಯದರ್ಶಿಯಾಗಿ ಎ.ಕೆ. ವೇಣು, ಉಪ ಕಾರ್ಯದರ್ಶಿಯಾಗಿ ಅಜಿತ ಧನರಾಜ್, ಖಜಾಂಚಿಯಾಗಿ ಬಿ.ಸಿ. ಆನಂದ, ನಿರ್ದೇಶಕರುಗಳಾಗಿ ಕೆ.ಬಿ. ಬಾಬು, ಕೆ. ಬಾಬು, ಕೆ. ರಾಜನ್, ಜಿ.ಸಿ. ಗೋಪಾಲಕೃಷ್ಣ, ಕೆ.ಜೆ. ರಾಬಿನ್, ಕೆ.ವಿ. ಪ್ರೇಮಾನಂದನ್, ಕೆ.ಆರ್. ರಾಜೇಶ್, ಎಂ.ಎಸ್. ಶಾಂತಿ, ಎನ್.ಎ. ಸುಶೀಲ, ಎಂ.ಆರ್. ವನಜ ಅವರುಗಳನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಗಿದೆ.
ಸಭೆಯಲ್ಲಿ ಓಣಂ ಹಬ್ಬ ಆಚರಣೆಯನ್ನು ರದ್ದುಗೊಳಿಸಿ ಸಂಗ್ರಹಿಸಿದ ಹಣವನ್ನು ಕೇರಳ ಮತ್ತು ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪದ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ನಿರ್ಣಯ ಕೈಗೊಳ್ಳಲಾಯಿತು.