ಪೊನ್ನಂಪೇಟೆ, ಸೆ. 15: ಸಾಯಿಶಂಕರ ಕಾಲೇಜು, ಪ್ರಶಾಂತಿ ನಿಲಯ, ಪೊನ್ನಂಪೇಟೆ ಇಲ್ಲಿ ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾ ಪೊಲೀಸ್ ಪೊನ್ನಂಪೇಟೆ ವತಿಯಿಂದ ಡ್ರಗ್ಸ್ ವಿರೋಧಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಬ್‍ಇನ್ಸ್‍ಪೆಕ್ಟರ್ ಮಹೇಶ್ ಪೊನ್ನಂಪೇಟೆ, ಸರ್ಕಲ್ ಇನ್ಸ್‍ಪೆಕ್ಟರ್ ದಿವಾಕರ್, ಸಾಯಿಶಂಕರ ಸಂಸ್ಥೆಯ ನಿರ್ದೇಶಕಿ ಗ್ರೀಟಾ ಅಪ್ಪಣ್ಣ, ಕಾಲೇಜು ಪ್ರಾಂಶುಪಾಲೆ ದಶಮಿ ಉಪಸ್ಥಿತರಿದ್ದರು. ಸರ್ಕಲ್ ಇನ್ಸ್‍ಪೆಕ್ಟರ್ ದಿವಾಕರ್ ಮಾದಕ ವಸ್ತು ವ್ಯಸನದ ಬಗ್ಗೆ ತಿಳಿಸಿ, ಸಮಾಜದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಒಳ್ಳೆಯ ಶಿಕ್ಷಣ ಪಡೆದು ತಮ್ಮ ಜೀವನದ ಗುರಿ ಮುಟ್ಟಲು ಕರೆ ನೀಡಿದರು. ಸಬ್‍ಇನ್ಸ್‍ಪೆಕ್ಟರ್ ಮಹೇಶ್ ಮಾದಕ ವ್ಯಸನಕ್ಕೆ ಕಾರಣ, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕಿ ಚೋಂದಮ್ಮ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಜರಿದ್ದರು.