ಮಡಿಕೇರಿ, ಸೆ.15 : ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ನಾಗರಿP ಜಿ.ಟಿ.ರಾಘವೇಂದ್ರ ಅವರು ಹಿರಿಯರು ಉತ್ಸಾಹದಿಂದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವದಕ್ಕೆ ಸಂತಸ ವ್ಯಕ್ತಪಡಿಸಿದರು.

ಹಿರಿಯ ನಾಗರಿಕರು ಸದಾ ಕ್ರಿಯಾಶೀಲತೆಯಿಂದ ಇರುವಂತಾ ಗಲು ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಲ್ಲೇಸ್ವಾಮಿ, ಹಿರಿಯ ನಾಗರಿಕ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷರಾದ ಪ್ರಸನ್ನ, ಕಮಲಾಕ್ಷಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ದೇವರಾಜು, ಮಹಾಲಿಂಗೇಶ್ವರ ವಿದ್ಯಾಸಂಸ್ಥೆ, ಸ್ತ್ರೀಶಕ್ತಿ ವೃದ್ಧಾಶ್ರಮ, ಹಿರಿಯ ನಾಗರಿಕರ ಸಹಾಯವಾಣಿ, ಹಿರಿಯ ನಾಗರಿಕ ಹಗಲು ಯೋಗಕ್ಷೇಮ, ವಿಕಾಸ್ ಜನಸೇವಾ ಟ್ರಸ್ಟ್ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

ಪುರುಷರಿಗೆ : 60-70 ವರ್ಷದವರಿಗೆ 100 ಮೀ.ಓಟ, 3 ಕೆ.ಜಿ ಗುಂಡೆಸೆತ, 71-80 ವರ್ಷದವರಿಗೆ 75 ಮೀ.ಓಟ, 3 ಕೆ.ಜಿ ಗುಂಡೆಸೆತ, 80 ವರ್ಷ ಮೇಲ್ಪಟ್ಟವರಿಗೆ 200 ಮೀ.ನಡಿಗೆ, ಕ್ರಿಕೆಟ್ ಚೆಂಡು ಎಸೆತ. ಮಹಿಳೆಯರಿಗೆ ಕ್ರೀಡಾ ಸ್ಪರ್ಧೆಗಳು: 60-70 ವರ್ಷದವರಿಗೆ 400ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ, 71-80 ವರ್ಷದವರಿಗೆ 200 ಮೀ.ನಡಿಗೆ, ಕ್ರಿಕೆಟ್ ಚೆಂಡು ಎಸೆತ, 80 ವರ್ಷ ಮೇಲ್ಪಟ್ಟವರಿಗೆ 100 ಮೀ ನಡಿಗೆ, ಕ್ರಿಕೆಟ್ ಚೆಂಡು ಎಸೆತ ಕ್ರೀಡಾಕೂಟಗಳು ನಡೆದವು.

60-70 ವರ್ಷದವರಿಗೆ ಏಕ ಪಾತ್ರಾಭಿನಯ, ಜಾನಪದ ಗೀತೆ, 71-80 ವರ್ಷದವರಿಗೆ ಏಕ ಪಾತ್ರಾಭಿನಯ, ಜಾನಪದ ಗೀತೆ, 80 ವರ್ಷ ಮೇಲ್ಪಟ್ಟವರಿಗೆ ಏಕ ಪಾತ್ರಾಭಿನಯ, ಜಾನಪದ ಗೀತೆ ಸಾಂಸ್ಕøತಿಕ ಸ್ಪರ್ಧೆಗಳು ಜರುಗಿದವು.