ನಾಪೆÇೀಕ್ಲು, ಸೆ. 15: ನಾಪೆÇೀಕ್ಲು ಆಟೋ ಚಾಲಕ ಸಂದೇಶ್ ಎಂಬವರಿಗೆ ಗುರುವಾರ ಸಂಜೆ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಮಾಟ್ ಎಂಬಲ್ಲಿ ಐವರು ಅಪರಿಚಿತರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ನಾಪೆÇೀಕ್ಲುವಿನ ಆಟೋ ಚಾಲಕ ಬಾಲಕೃಷ್ಣ ರೈ ಅವರ ಪುತ್ರ ಸಂದೇಶ್ ಗುರುವಾರ ಸಂಜೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿರುವ ರೋಗಿ ನಾಪೆÇೀಕ್ಲುವಿನ ರೋನಿ ಎಂಬವರಿಗೆ ಬಟ್ಟೆ ಮತ್ತು ಆಧಾರ ಕಾರ್ಡ್ ನೀಡುವ ಸಲುವಾಗಿ ರೋನಿ ಪತ್ನಿ ಹೇಮಾವತಿ ಅವರ ಪುತ್ರಿ ಮತ್ತು ಸತೀಶ ಅವರೊಂದಿಗೆ ಮಡಿಕೇರಿಗೆ ತೆರಳಿ ನಾಪೆÇೀಕ್ಲಿಗೆ ವಾಪಾಸ್ಸಾಗುವ ಸಂದರ್ಭ ಕೇಮಾಟ್‍ನಲ್ಲಿ ನೀಲಿ ಬಣ್ಣದ ಆಲ್ಟೋ ಕಾರ್‍ನಲ್ಲಿ ಆಗಮಿಸಿದ ಐದು ಮಂದಿ ಅಪರಿಚಿತರು ಆಟೋಗೆ ಕಾರನ್ನು ಅಡ್ಡಲಾಗಿರಿಸಿ ಹಲ್ಲೆ ನಡೆಸಿದ್ದಾರೆ ಎಂದು ಸಂದೇಶ್ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ನಾಪೆÀÇೀಕ್ಲು ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.