ಕುಶಾಲನಗರ, ಸೆ. 15: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುಶಾಲನಗರದ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ಹಿರಿಯ ಸಾಹಿತಿಗಳಾದ ದಿವಂಗತ ವಿ.ಎಸ್. ರಾಮಕೃಷ್ಣ ದತ್ತಿ ಬದುಕು ಮತ್ತು ಬರಹ ಉಪನ್ಯಾಸ ಹಾಗೂ ವಿಶ್ವಮುಖಿ ಭಾರತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್, ಸುಮಾರು ಇನ್ನೂರು ವರ್ಷಗಳ ಹಿಂದಿನ ಭಾರತದ ಸ್ಥಿತಿ ಗತಿಗಳನ್ನು ಮರೆಯಲು ಸಾಧ್ಯವಿಲ್ಲ.

ವೈಜ್ಞಾನಿಕತೆಯ ಜೊತೆಗೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗಮನಹರಿಸಿ ಸಾಹಿತ್ಯ ಕ್ಷೇತ್ರ ದಲ್ಲಿಯೂ ಪ್ರಸಿದ್ಧಿ ಪಡೆಯುವಂತೆ ಕರೆ ನೀಡಿದರು. ಆ ನಿಟ್ಟಿನಲ್ಲಿ ಮರೆ ಯಾಗಿರುವ ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ಮುನ್ನಡೆಯ ಬೇಕಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ನಾಗೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವದರ ಮೂಲಕ ಅವರ ದಾರಿಯಲ್ಲಿ ಯಶಸ್ಸು ಕಾಣಬೇಕು. ಅವರ ಸಿದ್ಧಾಂತಗಳು ಮತ್ತು ಭಾವನೆಗಳ ಭಾವನ್ಮಾತಕ ವಾಗಿ ಚಿಂತಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕುಶಾಲನಗರ ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್ ಮತ್ತು ಉದ್ಯಮಿ ಅಮೃತರಾಜ್, ಪರಿಷತ್ ಜಿಲ್ಲಾ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ಹೋಬಳಿ ಅಧ್ಯಕ್ಷ ರಂಗಸ್ವಾಮಿ ಇದ್ದರು.