ಮಡಿಕೇರಿ, ಸೆ. 14 : ಕೊಡಗಿನ ಆಲ್ಪೈನ್ ಮೋಟಾರ್ ಸ್ಪೋಟ್ರ್ಸ್ ತಂಡ ವಕೀಲ ಡಾ.ಯಾಲದಾಳು ಮನೋಜ್ ಬೋಪಯ್ಯ ಅವರ ನೇತೃತ್ವದಲ್ಲಿ 30 ಮಂದಿ ಅತಿವೃಷ್ಟಿ ಹಾನಿ ಸಂತ್ರಸ್ತರಿಗೆ ರೂ.6 ಲಕ್ಷದ ಚೆಕ್ ಹಾಗೂ ಪರಿಹಾರ ಸಾಮಗ್ರಿಗಳನ್ನು ವಿತರಿಸಿತು.
ನಗರದ ದೇವರಾಜ ಅರಸು ಭವನದಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ಮಾತನಾಡಿದ ಡಾ.ಮನೋಜ್ ಬೋಪಯ್ಯ ಅವರು, ಜಿಲ್ಲೆಯಲ್ಲಿ ವರುಣನ ಆರ್ಭಟದಿಂದ ದುರಂತಗಳು ಸಂಭವಿಸಿದ್ದು, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸಂತ್ರಸ್ತರÀ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೊಡಗಿನ ಆಲ್ಪೈನ್ ಮೋಟಾರ್ ಸ್ಪೋಟ್ರ್ಸ್ ತಂಡ ದುರಂತ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವದು ಶ್ಲಾಘನೀಯ ವೆಂದರು.
ತಂಡದ ಇನ್ನೋರ್ವ ಸದಸ್ಯ ಅಮೆ ಕೆ.ಪಾಲಾಕ್ಷ ಅವರು ಮಾತನಾಡಿ ಕೊಡಗಿನ ಜನ ನೀಡುವವರೆ ಹೊರತು ಬೇಡುವವರಲ್ಲ, ಆದರೆ ಕಾವೇರಿ ನಾಡಿನ ಜನತೆ ಇಂದು ಸಂಕಷ್ಟಕ್ಕೆ ಗುರಿಯಾಗಿದ್ದು, ಬದುಕಿಗಾಗಿ ದಾನಿಗಳನ್ನು ಅವಲಂಬಿಸಿರುವದು ಅತ್ಯಂತ ನೋವಿನ ವಿಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಂಡದ ಪ್ರಮುಖರಾದ ಯಶ್ ದೋಲ್ಪಾಡಿ, ಕುಮಾರಿ ಶಿಶಿರ ಅಪ್ಪಯ್ಯ ಬಾಡನ ಅವರುಗಳು ಮಾತನಾಡಿ ದಾನಿಗಳನ್ನು ಸ್ಮರಿಸಿಕೊಂಡರು.
ರೋಟರಿ ಮಿಸ್ಟಿ ಹಿಲ್ಸ್, ಮೈಸೂರಿನ ಎಸ್.ಲಿಂಕ್ಸ್ ಅಸೋಸಿಯೇಟ್ಸ್, ಬಾಲಾಜಿ ಗ್ರಾಮದ ವಿನ್ 4x4 ಕಸ್ಟಮ್ಸ್, ``ನಾಮ್‍ದಾರಿ ಆಗ್ರೋ ಪ್ರೆಶ್ ಪ್ರೈ.ಲಿ., ನಾರ್ತ್ ಈಸ್ರ್ಟ್ ಪೀಪಲ್ ಅಸೋಸಿಯೇಶನ್, ವಿ.ಟಿ.ಟಿ.ಟ್ರಾವೆಲ್ಸ್'', ನೆವಲ್ ಆಫೀಸರ್ಸ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಕೆ.ಜಿ.ಎಫ್., ಮಂಗಳೂರು ಜೀಪರ್ಸ್ ಕ್ಲಬ್, ಬೆಂಗಳೂರು ಮೋಟಾರ್ಸ್ ಸ್ಪೋಟ್ರ್ಸ್ ಕ್ಲಬ್, ಮರಗೋಡು ಸ್ಪೋಟ್ರ್ಸ್ ಆಂಡ್ ರಿಕ್ರಿಯೇಶನ್ ಕ್ಲಬ್ ಇವುಗಳು ಸಂತ್ರಸ್ತರಿಗಾಗಿ ಸಹಾಯ ಹಸ್ತ ಚಾಚಿದ ಸಂಘ, ಸಂಸ್ಥೆಗಳಾಗಿವೆ ಎಂದು ಆಯೋಜಕರು ಸ್ಮರಿಸಿಕೊಂಡರು.
ಇಂಡಿಯನ್ ನೇವಿಯ ಕಮಾಂಡರ್ ಹರ್ಷವರ್ಧನ್ ಸೂದನ, ರಾಜೇಶ್ ಸೂದನ, ಚಂದ್ರಶೇಖರ್. ಪಿ.ಎಸ್., ಮಡಿಕೇರಿ ಸರಕಾರಿ ಪದವಿ ಕಾಲೇಜಿನ ಚಿತ್ರ ಅಶೋಕ್ ಬಾಡನ, ಪ್ರೊ.ಶೋಭ. ಎಂ.ಎಸ್, ಉಪನ್ಯಾಸಕ ರಂಜನ್ ಬೋಪಯ್ಯ ಯಾಲದಾಳು, ರೀನಾ ತೆಕ್ಕಡೆ, ಚರಣ್ .ಕೆ., ಚಂದನ್ ಬಲ್ಲಚಂಡ, ಪ್ರವೀಣ್ ತಾತಪಂಡ, ಭೀಷ್ಮ ಸೂದನ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.