ಮಡಿಕೇರಿ, ಸೆ. 11: ಬೆಂಗಳೂರು ಹಾಕಿ ಸಂಸ್ಥೆ ಆಶ್ರಯದಲ್ಲಿ ಅಲ್ಲಿನ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಂತರ ಪ್ರೌಢಶಾಲಾ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಕೂಡಿಗೆ ಕ್ರೀಡಾ ವಸತಿ ಶಾಲೆ ತಂಡ ದ್ವಿತೀಯ ಹಾಗೂ ಪೊನ್ನಂಪೇಟೆ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿದೆ.

ಇಂದು ನಡೆದ ಅಂತಿಮ ಪಂದ್ಯಾವಳಿಯಲ್ಲಿ ಹಾಸನ ತಂಡ 2-0 ಗೋಲಿನಿಂದ ಕೂಡಿಗೆ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರೆ, ಕೂಡಿಗೆ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು.

ಮೂರನೇ ಸ್ಥಾನಕ್ಕೆ ನಡೆದ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ತಂಡ ಬೆಂಗಳೂರಿನ ಚಿನ್ಮಯ ಶಾಲಾ ತಂಡವನ್ನು 6-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಪಡೆದುಕೊಂಡಿತು.

ತಂಡದ ಪರ ಜಾಹ್ನವಿ, ನಿಸರ್ಗ ತಲಾ ಎರಡು ಗೋಲು ಬಾರಿಸಿದರೆ, ಆದಿರ ಹಾಗೂ ತುಷಾರ ತಲಾ 1 ಗೋಲು ಬಾರಿಸಿದರು. ತಂಡದ ತರಬೇತುದಾರರಾಗಿ ಪೊನ್ನಂಪೇಟೆ ಕ್ರೀಡಾ ಶಾಲೆ ತರಬೇತುದಾರ ಸುರೇಶ್ ಹಾಗೂ ತಂಡದ ವ್ಯವಸ್ಥಾಪಕಿಯಾಗಿ ಶಿಕ್ಷಕಿ ಕೆ.ಎಲ್. ರೋಹಿಣಿ ಕಾರ್ಯನಿರ್ವಹಿಸಿದರು.