ಗೋಣಿಕೊಪ್ಪ ವರದಿ, ಸೆ. 10: ಭೂಕುಸಿತದಿಂದ ಆಗಿರುವ ಸಾವು-ನೋವಿನ ಹಿನ್ನೆಲೆಯಿಂದಾಗಿ ಅಮ್ಮಕೊಡವ ಜನಾಂಗ ನಿಗಧಿಪಡಿಸಿದ್ದ ಹೆಮ್ಮಚ್ಚಿಮನೆ ಕ್ರೀಡಾಕೂಟವನ್ನು ರದ್ದು ಪಡಿಸಲಾಗಿದೆ.

ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಕ್ರೀಡಾಕೂಟವನ್ನು ಮೇ ತಿಂಗಳನಲ್ಲಿ ನಡೆಸಲು ನಿಗಧಿ ಪಡಿಸಲಾಗಿತ್ತು. ಆದರೆ, ಭೂಕುಸಿತದಿಂದ ಆಗಿರುವ ನೋವಿನ ನಡುವೆ ಕ್ರೀಡಾಕೂಟವನ್ನು ರದ್ದು ಪಡಿಸಲು ನಿರ್ಧರಿಸಲಾಗಿದೆ. 2020ಕ್ಕೆ ಕ್ರೀಡಾಕೂಟ ನಡೆಯಲಿದೆ ಎಂದು ಹೆಮ್ಮಚ್ಚಿಮನೆ ಕುಟುಂಬ ಅಧ್ಯಕ್ಷ ಮಾದಮಯ್ಯ ಹಾಗೂ ಕ್ರೀಡಾಕೂಟ ಅಧ್ಯಕ್ಷ ಹೆಮ್ಮಚ್ಚಿಮನೆ ಆಶಿತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.