ಮಡಿಕೇರಿ, ಸೆ. 9: ಸೇನಾ ನೇಮಕಾತಿ ಕಚೇರಿ, ಬೆಂಗಳೂರು ವಲಯ ಇವರ ವತಿಯಿಂದ ಅಕ್ಟೋಬರ್ 13 ರಿಂದ 19 ರವರೆಗೆ ಮಂಡ್ಯ ಜಿಲ್ಲಾ ಕ್ರೀಡಾ ಮೈದಾನದಲ್ಲಿ ಸಿಪಾಯಿ ಸಾಮಾನ್ಯ ಕರ್ತವ್ಯ, ಸಿಪಾಯಿ ತಾಂತ್ರಿಕ, ಸೈನಿಕ ನರ್ಸಿಂಗ್ ಸಹಾಯಕ, ಸಹಾಯಕ ಪಶುವೈದ್ಯ, ಸೈನಿಕ ಟ್ರೇಡ್ಸ್‍ಮೆನ್, ಚೆಫ್, ಮೆಸ್ಸ್ ಕೀಪರ್ ಹಾಗೂ ಸೈನಿಕ ಲಿಪಿಕ, ಉಗ್ರಾಣ ಪಾಲಕ ತಾಂತ್ರಿಕ ಹುದ್ದೆಗಳಿಗೆ ಭಾರತೀಯ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ. ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ನ ಮುಖಾಂತರ ತಾ. 28 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.