ಮಡಿಕೇರಿ, ಸೆ. 9: ಮಡಿಕೇರಿ ಕೊಡವ ಸಮಾಜದ ಕಲ್ಚರಲ್ ಮತ್ತು ಸೋಷಿಯಲ್ ವೆಲ್‍ಫೇರ್ ಸೆಂಟರ್‍ನ ವಾರ್ಷಿಕ ಮಹಾಸಭೆ ಇಂದು ಸಂಸ್ಥೆಯ ಅಧ್ಯಕ್ಷ ಮುಂಡಂಡ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸೋಮಣ್ಣ ಅವರು ಚಟುವಟಿಕೆಗಳ ಬಗ್ಗೆ ವಿವರ ನೀಡಿದರು.

ಕಾರ್ಯದರ್ಶಿ ಚೆರುಮಂದಂಡ ಮಣಿಪೊನ್ನಪ್ಪ ಅವರು, ಆಡಳಿತ ಮಂಡಳಿ ವರದಿ ಹಾಗೂ ಸಂಸ್ಥೆ ನಡೆಸಿದ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಖಜಾಂಚಿ ಮುಂಡಂಡ ಗಾಂಧಿ ಅವರು ಲೆಕ್ಕಪತ್ರ ಮಂಡಿಸಿದರು. ಪದಾಧಿಕಾರಿ ಪಡೆಯಟ್ಟಿರ ಹರೀಶ್ ಪ್ರಾರ್ಥಿಸಿ, ಉಪಾಧ್ಯಕ್ಷ ಬಲ್ಲಂಡ ಪ್ರಕಾಶ್ ವಂದಿಸಿದರು.

ಅವಿರೋಧ ಆಯ್ಕೆ

ಸಂಸ್ಥೆಯ ಆಡಳಿತ ಮಂಡಳಿಯ ಮುಂದಿನ ಸಾಲಿಗೆ ಇಂದು ಚುನಾವಣೆ ನಡೆಯಬೇಕಿದ್ದು, ಎಲ್ಲಾ 15 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಬಲ್ಯಂಡ ನಂಜಪ್ಪ ಅವರು ಸಭೆಯಲ್ಲಿ ಪ್ರಕಟಿಸಿದರು.

ಮುಂದಿನ ಸಾಲಿಗೆ ಮುಂಡಂಡ ಸೋಮಣ್ಣ, ಬಲ್ಯಂಡ ಪ್ರಕಾಶ್, ಚೆರುಮಂದಂಡ ಮಣಿ ಪೊನ್ನಪ್ಪ, ಪಡೆಯಟ್ಟಿರ ಹರೀಶ್, ಬೊಪ್ಪಂಡ ಶ್ಯಾಮ್ ಪೂಣಚ್ಚ, ಕಾಯಪಂಡ ಗಣೇಶ್ ಉತ್ತಪ್ಪ, ಮುಳ್ಳಂಡ ರತು ಚಂಗಪ್ಪ, ನಾಳಿಯಂಡ ಕೆ. ಅಯ್ಯಪ್ಪ, ಐಚಂಡ ಎಂ. ರಘು ಅಪ್ಪಯ್ಯ, ಬಲ್ಯಾಟಂಡ ಪಾರ್ಥ ಚಂಗಪ್ಪ, ಮೂವೆರ ಶಂಭು ಸುಬ್ಬಯ್ಯ, ಬಿದ್ದಂಡ ಬೆನ್ ಬೆಳ್ಯಪ್ಪ, ಕೋಡಿರ ಅರುಣ್ ಅಪ್ಪಣ್ಣ, ಮುಕ್ಕಾಟಿರ ರಾಫಿ ಮೇದಯ್ಯ, ಕೆಚ್ಚೆಟೀರ ರ್ಯಾಲಿ ಬಿದ್ದಪ್ಪ ಅವರುಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.