ಮಡಿಕೇರಿ, ಸೆ. 8: ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಯವಕಪಾಡಿ ನಾಲಡಿ ಮರಂದೋಡ ಕುಂಜಿಲ ವಾರ್ಡ್‍ಸಭೆಯ ವಿವರ ಈ ಕೆಳಗಿನಂತಿದೆ:

ಕುಂಜಿಲ ಎ. ಭಾಗದ ವಾರ್ಡ್‍ಸಭೆ ಸದಸ್ಯೆ ಜಾನಕಿ ಮಧುರ ಅವರ ಅಧ್ಯಕ್ಷತೆಯಲ್ಲಿ ತಾ. 11ರಂದು ಪೂರ್ವಾಹ್ನ 11 ಗಂಟೆಗೆ ಕಕ್ಕಬೆ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ನಡೆಯಲಿದೆ. ಯವಕಪಾಡಿ ವಾರ್ಡ್‍ಸಭೆ ಅದೇ ದಿನ ಮಧ್ಯಾಹ್ನ 2.30ಕ್ಕೆ ಸದಸ್ಯೆ ಬಡಕಡ ಪ್ರವೀಣಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ನಾಲಡಿ ವಾರ್ಡ್‍ಸಭೆಯು ತಾ. 14ರಂದು ಪೂರ್ವಾಹ್ನ 11 ಗಂಟೆಗೆ ಸದಸ್ಯೆ ಕುಡಿಯರ ಬೋಜಕ್ಕಿ ಅವರ ಅಧ್ಯಕ್ಷತೆಯಲ್ಲಿ ಅಂಬಲ ಶಾಲಾ ಸಭಾಂಗಣದಲ್ಲೂ, ಮರಂದೋಡ ಗ್ರಾಮದ ವಾರ್ಡ್‍ಸಭೆ ಸದಸ್ಯೆ ಬಿಲ್ಲವರ ಪುಷ್ಪ ಅವರ ಅಧ್ಯಕ್ಷತೆಯಲ್ಲಿ ಅಪರಾಹ್ನ 2.30 ಗಂಟೆಗೆ ಅಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ಕುಂಜಿಲ ಬಿ ಮತ್ತು ಸಿ ವಿಭಾಗದ ವಾರ್ಡ್‍ಸಭೆ ಸದಸ್ಯ ಕುಂಡಂಡ ರಝಾಕ್ ಅಧ್ಯಕ್ಷತೆಯಲ್ಲಿ ತಾ. 15ರಂದು ಮಧ್ಯಾಹ್ನ 2.30ಕ್ಕೆ ಕೆ.ಪಿ. ಬಾಣೆ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.