ಗೋಣಿಕೊಪ್ಪಲು, ಸೆ. 8: ದ.ಕೊಡಗಿನ ಕುರ್ಚಿ,ಬೀರುಗ,ನಾಲ್ಕೇರಿ, ಕುಮಟೂರು,ಶ್ರೀಮಂಗಲ ವ್ಯಾಪ್ತಿಯಲ್ಲಿನ ಬಡ ಕೃಷಿಕ, ರೈತ,ಕಾರ್ಮಿಕ ಕುಟುಂಬಗಳನ್ನು ಮೂಲವಾಗಿರಿಸಿಕೊಂಡು ಇಂತಹ ಕುಟುಂಬದ ಸದಸ್ಯರಿಗೆ ಕೆಲವು ಆಮಿಷ ತೋರಿಸುವ ಮೂಲಕ ಕ್ರೈಸ್ತ ಮಿಷನರಿಗಳು ಮತಾಂತರ ಮಾಡುತ್ತಿವೆ. ವಿಪರೀತ ಸುರಿದಿರುವ ಮಳೆಯಿಂದ ಹಾನಿಗೊಳಗಾಗಿ ತೊಂದರೆಯಲ್ಲಿ ಸಿಲುಕಿರುವವರನ್ನೇ ಕೇಂದ್ರವಾಗಿರಿಸಿಕೊಂಡು ಮತಾಂತರ ಎಗ್ಗಿಲ್ಲದೆ ನಡೆಯುತ್ತಿದೆ.ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀಮಂಗಲ ಪೊಲೀಸ್ ಠಾಣೆಯ ಮುಂದೆ ಗ್ರಾಮಸ್ಥರು ಪ್ರತಿಭಟಿಸಿದರು.ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಕೆ.ಬೋಪಣ್ಣ, ಮುಂದಾಳತ್ವದಲ್ಲಿ ಶ್ರೀಮಂಗಲ ಗ್ರಾಮ ಪಂಚಾಯಿತಿ

(ಮೊದಲ ಪುಟದಿಂದ) ಸಭಾಂಗಣದಲ್ಲಿ ಸಭೆ ಸೇರಿದ ಊರಿನ ಮುಖಂಡರು ನಂತರ ಪೊಲೀಸ್ ಠಾಣೆಯ ಮುಂದೆ ಜಮಾವಣೆ ಗೊಂಡು ಪ್ರತಿಭಟಿಸಿದರು.

ಕುರ್ಚಿ ಗ್ರಾಮದಲ್ಲಿರುವ 20 ಎಕರೆ ಕಾಫಿ ತೋಟದ ಮಾಲೀಕ ಜೋಸ್ ಎಂಬಾತ ರಾಜು ಎಂಬ ರೈಟರ್‍ಅನ್ನು ನೇಮಿಸಿದ್ದರು. ಈತ ಕ್ರೈಸ್ತ ಮತಕ್ಕೆ ಬರುವಂತೆ ಕೆಲವು ಆಮಿಷಗಳನ್ನು ಒಡ್ಡುವ ಮೂಲಕ ಈ ಭಾಗದ ಬಡ ಕುಟುಂಬಗಳನ್ನು ಮತಾಂತರ ಮಾಡುತ್ತಿದ್ದಾನೆಂದು ಗ್ರಾಮಸ್ಥರು ಆರೋಪಿಸಿದರು. ನೆಮ್ಮದಿಯ ಬದುಕು ಕಂಡಿದ್ದ ಈ ಭಾಗದ ಜನತೆ ಮತಾಂತರಗೊಳ್ಳುವ ಮೂಲಕ ಈ ಭಾಗದಲ್ಲಿ ಜನಾಂಗದ ಮಧ್ಯೆ ಕೋಮು ಭಾವನೆ ಸೃಷ್ಟಿಸಲು ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು. ತೋಟದ ಮಾಲೀಕ ಜೋಸ್ ತೋಟದ ರೈಟರ್ ಆಗಿ ಬೇರೆಯ ವರನ್ನು ನೇಮಿಸಿಕೊಳ್ಳಬೇಕು. ಈತನಿಂದ ಈ ಭಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯಲು ಕಾರಣ ವಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳನ್ನು ಎಚ್ಚರಿಸಿದರು. ಕೂಡಲೇ ಈ ಭಾಗದಲ್ಲಿ ನೆಮ್ಮದಿ ಹಾಳಾಗದಂತೆ ಪೊಲೀಸರು ಕ್ರಮ ವಹಿಸಬೇಕು. ಅನ್ಯ ರಾಜ್ಯದಿಂದ ಈ ತೋಟಕ್ಕೆ ಬರುವ ಮಹಿಳೆಯರ ಬಗ್ಗೆ ವಿಶೇಷ ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸಂಸಾರ ಸಹಿತರಾಗಿ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸ ಲಾಗುವದೆಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಅಜ್ಜಮಾಡ ಜಯ, ಅಜ್ಜಮಾಡ ಬೋಪಣ್ಣ, ಮಾಣೀರ ಬೋಪಣ್ಣ, ಕಟ್ಟೇರ ಈಶ್ವರ, ರೈತ ಮುಖಂಡರಾದ ಅಜ್ಜಮಾಡ ಚಂಗಪ್ಪ, ಐಯ್ಯಮಾಡ ಹ್ಯಾರಿ ಸೋಮೇಶ್, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.