ಮಡಿಕೇರಿ, ಸೆ. 8: ಬೆಂಗಳೂರು ಹಾಕಿ ಸಂಸ್ಥೆ ಆಶ್ರಯದಲ್ಲಿ ಅಲ್ಲಿನ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಂತರ ಪ್ರೌಢ ಶಾಲಾ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ಕ್ರೀಡಾ ಶಾಲೆ ತಂಡ ಸೆಮಿಫೈನಲ್ಗೇರಿದೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ತಂಡ ನಾಯಂದಹಳ್ಳಿ ಶಾಲಾ ತಂಡವನ್ನು 6-0 ಗೋಲಿ ನಿಂದ ಮಣಿಸಿ ಸೆಮಿಫೈನಲ್ಗೇರಿದೆ. ತಂಡದ ಪರ ಜಾನ್ಹವಿ 3, ನಿಸರ್ಗ 2, ಸುರಕ್ಷಾ 1 ಗೋಲು ಬಾರಿಸಿದರು. ತಾ. 10 ರಂದು ಚಿನ್ಮಯ ಶಾಲಾ ತಂಡದೊಂದಿಗೆ ಸೆಮಿಫೈನಲ್ ನಡೆಯಲಿದೆ. ತರಬೇತುದಾರರಾಗಿ ಕ್ರೀಡಾಶಾಲೆಯ ಸುರೇಶ್ ಹಾಗೂ ವ್ಯವಸ್ಥಾಪಕಿಯಾಗಿ ಶಿಕ್ಷಕಿ ಕೆ.ಎಲ್. ರೋಹಿಣಿ ಕಾರ್ಯನಿರ್ವಹಿಸುತ್ತಿದ್ದಾರೆ.