ಮಡಿಕೇರಿ, ಸೆ. 6: ದಕ್ಷಿಣ ಕೊಡಗಿನ ಪ್ರತಿಷ್ಠಿತ ಖಾಸಗಿ ಸಂಸ್ಥೆಯೊಂದು ವಿದ್ಯಾರ್ಥಿಗಳ ಪ್ರವಾಸ ಹಮ್ಮಿಕೊಂಡು ತಲಾ ರೂ. 40 ಸಾವಿರ ಶುಲ್ಕ ವಿಧಿಸಿದ್ದು, ಕೊಡಗಿನ ಇಂದಿನ ಪರಿಸ್ಥಿತಿಯಲ್ಲಿ ಅದನ್ನು ರದ್ದು ಪಡಿಸಬೇಕೆಂದು ಹಲವು ಪೋಷಕರು ಆಗ್ರಹಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಅಂಡಮಾನ್‍ಗೆ ಪ್ರವಾಸ ಕೈಗೊಳ್ಳಲು ಈಗಲೇ ರೂ. 40 ಸಾವಿರ ಪಾವತಿಸುವಂತೆ ಆಡಳಿತ ಮಂಡಳಿ ಸೂಚಿಸಿದೆ ಎಂದು ವಿವರಿಸಿರುವ ಹಲವು ಪೋಷಕರು, ಅತಿವೃಷ್ಟಿ ಹಾಗೂ ಕೊಡಗಿನ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಹಲವರಿಗೆ ಈ ಶುಲ್ಕ ನುಂಗಲಾರದ ತುಪ್ಪವಾಗಿದೆ; ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಈ ವರ್ಷ ಪ್ರವಾಸವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.