ವೀರಾಜಪೇಟೆ, ಸೆ. 6: ಮಲಬಾರು ರಸ್ತೆಯ ಮೀನುಪೇಟೆ ಮಸ್ಜಿದುನ್ನೂರ್ ಆಶ್ರಯದಲ್ಲಿ ತಾ.7ರಂದು (ಇಂದು) ರಾತ್ರಿ ಮಗ್‍ರಿಬ್ ನಮಾಝ್ ನಂತರ ಮಜ್‍ಲಿಸುನ್ನೂರ್ ಹಾಗೂ ರಾತ್ರಿ 8.30ಕ್ಕೆ ಧಾರ್ಮಿಕ ಉಪನ್ಯಾಸ ನಡೆಯಲಿದೆ. ‘ಸಂತೃಪ್ತ ಕುಟುಂಬ’ ಎಂಬ ವಿಷಯದಲ್ಲಿ ಉಸ್ಮಾನ್ ದಾರಿಮಿ ಉಪನ್ಯಾಸ ನೀಡಲಿದ್ದಾರೆ. ಮಹಿಳೆಯರಿಗೂ ಸೌಲಭ್ಯ ಕಲ್ಪಿಸಲಾಗಿದೆಯೆಂದು ಸಂಘಟಕರು ತಿಳಿಸಿದ್ದಾರೆ.