ಮಡಿಕೇರಿ, ಆ. 31: ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ಜಿಲ್ಲೆಯ ಹಲವಾರು ಭಾಗಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪುತ್ತೂರು ವಿಭಾಗ, ಮಡಿಕೇರಿ ಘಟಕದ ಮೂಲಕ ಈ ಕೆಳಕಂಡಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಮಿನಿ ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.

ಮಡಿಕೇರಿ, ಹಾಲೇರಿ, ಮಕ್ಕಂದೂರು, ಮಾದಾಪುರ, ಸೋಮವಾರಪೇಟೆ, ಬೆಂಗಳೂರಿಗೆ ಹೋಗುವ ಬಸ್‍ಗಳನ್ನು ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಸೋಮವಾರಪೇಟೆ ಮೂಲಕ ಬೆಂಗಳೂರಿಗೆ ಕಾರ್ಯಾಚರಿಸುತ್ತಿದೆ.

ಮಡಿಕೇರಿಯಿಂದ ಮಡಿಕೇರಿ, ಮೇಕೇರಿ ಮೂಲಕ ವೀರಾಜಪೇಟೆ, ಬೆಂಗಳೂರಿಗೆ ಹೋಗುವ ವಾಹನಗಳನ್ನು ಮಡಿಕೇರಿ, ಚೆಟ್ಟಳ್ಳಿ, ಸಿದ್ದಾಪುರ, ಗೋಣಿಕೊಪ್ಪಲು ಮೂಲಕ ಮೈಸೂರು, ಬೆಂಗಳೂರಿಗೆ ಕಾರ್ಯಾಚರಿಸುತ್ತಿದೆ.

ಮಡಿಕೇರಿಯಿಂದ ಬೆಳಿಗ್ಗೆ 8 ಗಂಟೆಗೆ ಸುಂಟಿಕೊಪ್ಪ, ಮಾದಾಪುರ ಮಾರ್ಗವಾಗಿ ಸೋಮವಾರಪೇಟೆ ಮಾರ್ಗವಾಗಿ ಹೋಗಿ ಪುನಃ ಅದೇ ಮಾರ್ಗವಾಗಿ ಸೋಮವಾರಪೇಟೆ ತಲಪಿ ಕಿಕ್ಕರಳ್ಳಿ, ಸೂರ್ಲಬ್ಬಿ, ಗರ್ವಾಲೆಗೆ ತಲಪಿ, ಗರ್ವಾಲೆಯಲ್ಲಿ ತಂಗಿ, ಪುನಃ ಬೆಳಿಗ್ಗೆ 7 ಗಂಟೆಗೆ ಅಲ್ಲಿಂದ ಹೊರಟು ಅದೇ ಮಾರ್ಗವಾಗಿ ಮಡಿಕೇರಿಗೆ ಕಾರ್ಯಾಚರಿಸುತ್ತಿದೆ.

ಮಡಿಕೇರಿ, ಸುಳ್ಯಕ್ಕೆ ಭಾಗಮಂಡಲ, ಕರಿಕೆ, ಪಾಣತ್ತೂರು, ಆಲೆಟ್ಟಿ ಮಾರ್ಗವಾಗಿ ಸುಳ್ಯಕ್ಕೆ ಕರ್ನಾಟಕ ಸಾರಿಗೆ ವಾಹನಗಳನ್ನು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಪ್ರತಿ ಗಂಟೆಗೆ ಕಾರ್ಯಾಚರಿಸುತ್ತಿದೆ.

ಮಿನಿ ಬಸ್‍ಗಳನ್ನು ಮಡಿಕೇರಿ-ಮೇಕೇರಿ ನಡುವೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7.30 ರವರೆಗೆ ಪ್ರತಿ 15 ನಿಮಿಷಕ್ಕೊಮ್ಮೆ ಕಾರ್ಯಾಚರಿಸುತ್ತಿದೆ.

ಮಡಿಕೇರಿ-ಮಕ್ಕಂದೂರಿಗೆ 3 ಮಿನಿ ಬಸ್‍ಗಳು ಬೆಳಿಗ್ಗೆ 8.30 ಗಂಟೆಗೆ, ಅಪರಾಹ್ನ 2 ಗಂಟೆಗೆ ಹಾಗೂ ಸಂಜೆ 4.15 ಗಂಟೆಗೆ ಕಾರ್ಯಾಚರಿಸುತ್ತಿದೆ.

ಭಾಗಮಂಡಲಕ್ಕೆ ಹೋಗುವ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬೆಳಿಗ್ಗೆ 7 ಗಂಟೆಗೆ ಅಯ್ಯಂಗೇರಿ, ಬಲ್ಲಮಾವಟಿ, ಪೇರೂರು, ನಾಪೋಕ್ಲು, ಹೊದ್ದೂರು, ಮೂರ್ನಾಡು ಮಾರ್ಗವಾಗಿ ಮಡಿಕೇರಿಗೆ ಕಾರ್ಯಾಚರಣೆ ಮಾಡಿ ಪುನಃ ಅದೇ ಮಾರ್ಗವಾಗಿ ಸಂಜೆ 4.30 ಕ್ಕೆ (ಶಾಲಾ ಮಕ್ಕಳ ಅನುಕೂಲಕ್ಕಾಗಿ) ಮಡಿಕೇರಿಯಿಂದ ಭಾಗಮಂಡಲಕ್ಕೆ ಕಾರ್ಯಾಚರಿಸುತ್ತಿವೆ.

ಮಡಿಕೇರಿ-ಕಾಟಕೇರಿಗೆ 3 ಮಿನಿ ಬಸ್‍ಗಳು ಬೆಳಿಗ್ಗೆ 8.30 ಗಂಟೆಗೆ, ಅಪರಾಹ್ನ 2 ಗಂಟೆಗೆ ಹಾಗೂ ಸಂಜೆ 4.15 ಗಂಟೆಗೆ ಕಾರ್ಯಾಚರಿಸುತ್ತಿದೆ.

ಮಡಿಕೇರಿಯಿಂದ ಸುಂಟಿಕೊಪ್ಪ, ಗರಗಂದೂರು ಮಾರ್ಗವಾಗಿ ಮಾದಾಪುರಕ್ಕೆ ಬೆಳಿಗ್ಗೆ 8 ಗಂಟೆಯಿಂದ (ಶಾಲಾ ಮಕ್ಕಳ ಅನುಕೂಲಕ್ಕಾಗಿ) ಸಂಜೆ 4 ಗಂಟೆಗೆ ಅದೇ ಮಾರ್ಗವಾಗಿ ಕಾರ್ಯಾಚರಿಸುತ್ತಿದೆ.